ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬಾರ್ ​​ಗೆ ಕಳ್ಳತನ ಮಾಡಲು ಹೋಗಿ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಕಳ್ಳ..! ಏನಿದು ವಿಚಿತ್ರ ಘಟನೆ..?

215

ನ್ಯೂಸ್ ನಾಟೌಟ್ : 2025 ರ ಹೊಸ ವರ್ಷದ ಸಂಭ್ರಮಾಚರಣೆಗೆ ದುಡಿಲ್ಲದೆ ತೆಲಂಗಾಣ ವ್ಯಕ್ತಿಯೊಬ್ಬ ಮದ್ಯದ ಅಂಗಡಿಗೆ ನುಗ್ಗಿ ಮದ್ಯದ ಬಾಟಲಿಗಳನ್ನು ದೋಚಿದ್ದಾನೆ. ಕದ್ದ ಬಾಟಲಿಯೊಂದಿಗೆ ಬಾರ್ ​ನಿಂದ ಹೊರಗಡೆ ಬರುವ ಮುನ್ನ ಅಲ್ಲಿದ್ದ ಒಂದಿಷ್ಟು ಮದ್ಯವನ್ನು ಕುಡಿದು ಮತ್ತೆ ಹೋಗುವ ಎಂದು ಪ್ಲಾನ್​​ ಮಾಡಿದ್ದಾನೆ. ಆದರೆ ಕಂಠಪೂರ್ತಿ ಕುಡಿದ ಕಳ್ಳ ಅಲ್ಲೇ ಮಲಗಿದ್ದು, ಮರುದಿನ ಬೆಳಿಗ್ಗೆ ಅಂಗಡಿಯ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಾನೆ. ತೆಲಂಗಾಣದ ಮೇದಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಭಾನುವಾರ(ಡಿ.29) ರಾತ್ರಿ ‘ಕನಕದುರ್ಗಾ ವೈನ್ಸ್’ ಹೆಸರಿನ ಅಂಗಡಿಗೆ ನುಗ್ಗಿ ಛಾವಣಿಯ ಕೆಲವು ಹೆಂಚುಗಳನ್ನು ಕಿತ್ತು, ಸಿಸಿಟಿವಿ ಕ್ಯಾಮೆರಾ ನಿಷ್ಕ್ರಿಯಗೊಳಿಸಿ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಕದ್ದಿದ್ದ ಕಳ್ಳ, ಇನ್ನೇನು ಅಂಗಡಿಯಿಂದ ಪಾರಾಗಬೇಕು ಎನ್ನುವಷ್ಟರಲ್ಲಿ ಚಳಿಗೆ ಸ್ಪಲ್ಪ ಕುಡಿದು ಮತ್ತೆ ಹೋಗುವ ಎಂದು ಯೋಚಿಸಿದ್ದಾನೆ. ಆದರೆ ಮದ್ಯದ ಆಸೆಗೆ ಕಂಠಪೂರ್ತಿ ಕುಡಿದಿದ್ದಾನೆ. ಸೋಮವಾರ ಮುಂಜಾನೆ ಅಂಗಡಿ ಮಾಲೀಕ ಅಂಗಡಿಯ ಬಾಗಿಲು ತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಕಂಡು ಶಾಕ್​ ಆಗಿದ್ದಾರೆ.

ಸೋಮವಾರ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ಬಂದ ನಂತರ ಘಟನೆಯ ದೃಶ್ಯಗಳು ಆನ್‌ ಲೈನ್‌ ನಲ್ಲಿ ಕಾಣಿಸಿಕೊಂಡಿವೆ. ಕಳ್ಳ ಮದ್ಯದಂಗಡಿಯಲ್ಲಿ ನೆಲದ ಮೇಲೆ ಮಲಗಿದ್ದು ನಗದು ಮತ್ತು ಮದ್ಯದ ಬಾಟಲಿಗಳು ಅವನ ಸುತ್ತಲೂ ಬಿದ್ದಿರುವುದು ಕಂಡಿದೆ.
ಕಳ್ಳನನ್ನು ಬಂಧಿಸಿ, ಆತನ್ನು ಆಂಬ್ಯುಲೆನ್ಸ್‌ ನಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

Click

https://newsnotout.com/2024/12/kannada-news-play-child-kannada-news-viral-news-news-not-out/
https://newsnotout.com/2024/12/america-president-donald-trup-facts-of-case-kannada-news-d/
https://newsnotout.com/2024/12/udupi-padubidri-kannada-news-2-young-people-nomore/
See also  ಬೇಲ್ ಪಡೆದು ಜೈಲಿಂದ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಹತ್ಯೆ..! ತನಿಖೆಯ ವೇಳೆ ಬಯಲಾಯ್ತು ಭಯಾನಕ ಸತ್ಯ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget