ಕರಾವಳಿಕ್ರೈಂಪುತ್ತೂರು

ಉಪ್ಪಿನಂಗಡಿಯಲ್ಲಿ ಸರಣಿ ಕಳ್ಳತನ

284

ನ್ಯೂಸ್‌ ನಾಟೌಟ್‌: ಉಪ್ಪಿನಂಗಡಿ ಬ್ಯಾಂಕ್‌ ರಸ್ತೆಯಲ್ಲಿನ 7 ಅಂಗಡಿಗಳಲ್ಲಿ ಶನಿವಾರ ರಾತ್ರಿ ಕಳ್ಳತನ ನಡೆಸಿ ಹಲವಾರು ವಸ್ತುಗಳನ್ನು ಕಳವುಗೈದ ಘಟನೆ ನಡೆದಿದೆ.

ಉಪ್ಪಿನಂಗಡಿ ಹಳೆಯ ಬಸ್‌ ನಿಲ್ದಾಣದ ಬಳಿಯ ಚಿನ್ನ – ಬೆಳ್ಳಿ ಆಭರಣದ ಅಂಗಡಿಯ ಮಾಡಿನ ಹೆಂಚು ತೆಗೆದು ಒಳ ನುಗ್ಗಿದ ಕಳ್ಳ ಚಿನ್ನಾಭರಣದ ತಿಜೋರಿಯ ಬಾಗಿಲು ತೆರೆಯಲು ವಿಫ‌ಲವಾಗಿ, ಚಿಲ್ಲರೆ ಮೊತ್ತ ಎಗರಿಸಿದ್ದಾನೆ. ಸನಿಹದ ಮೆಡಿಕಲ್‌ ಶಾಪಿನ ಹೆಂಚು ತೆಗೆದು ಒಳ ನುಗ್ಗಿದ ಕಳ್ಳ, ಅಂಗಡಿ ಯೊಳಗಿದ್ದ ಮೊಬೈಲ್‌ವೊಂದನ್ನು ಕದ್ದೊಯ್ದಿದ್ದಾನೆ. ಅದೇ ಕಟ್ಟಡದ ಜವುಳಿ ಅಂಗಡಿಗೂ ಮಾಡಿನ ಹೆಂಚು ತೆಗೆದು ನುಗ್ಗಿದ್ದಾನೆ.

ಇದೇ ರಸ್ತೆಯ ಕೆನರಾ ಬ್ಯಾಂಕ್‌ ಸನಿಹದ ಹೋಟೆಲ್‌, ಫ‌ರ್ನಿಚರ್‌ ಅಂಗಡಿ, ಜನರಲ್‌ ಸ್ಟೋರ್, ದಿನಸಿ ಅಂಗಡಿ ಕಟ್ಟಡಗಳಿಗೂ ಒಳ ನುಗ್ಗಿದ ಕಳ್ಳ ಅಲ್ಲಿಂದಲೂ ಕೈಗೆ ದೊರೆತ ವಸ್ತುಗಳನ್ನೆಲ್ಲ ಎಗರಿಸಿದ್ದಾನೆ. ಫ‌ನಿರ್ಚರ್‌ ಅಂಗಡಿಯೊಳಗಿದ್ದ ಬೆಲೆ ಬಾಳುವ ವಾಚೊಂದನ್ನು ಕದ್ದೊಯ್ದಿದ್ದು, ಎಲ್ಲೆಡೆ ಅಂಗಡಿಯ ಮಾಡಿನಿಂದಲೇ ಕಳ್ಳ ಒಳಪ್ರವೇಶಿಸಿದ್ದಾನೆ.

ಉಪ್ಪಿನಂಗಡಿಯಲ್ಲಿ ನಡೆದ 7 ಪ್ರಕರಣಗಳಿಗೂ ಸಾಮ್ಯತೆ ಇದ್ದು, ಓರ್ವನೇ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸಿಸಿ ಕೆಮರಾದಲ್ಲಿ ಕಳ್ಳನ ಭಾವ ಚಿತ್ರ ಸ್ಪಷ್ಟವಾಗಿ ಸೆರೆಯಾಗಿದ್ದು, ಪ್ರತಿಯೊಂದು ಅಂಗಡಿಯೊಳಕ್ಕೆ ನುಗ್ಗಿದಾಕ್ಷಣದಲ್ಲೇ ಕಳ್ಳ ಸಿಸಿ ಕೆಮರಾದ ದಿಕ್ಕು ಬದಲಾಯಿಸುವ ಪ್ರಯತ್ನ ಮಾಡಿದ್ದು, ಆ ವೇಳೆ ಆತನ ಮುಖ ಕೆಮರಾದಲ್ಲಿ ಸೆರೆಯಾಗಿದೆ. ಉಪ್ಪಿನಂಗಡಿ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

See also  ಸುಳ್ಯ: ನಡೆದುಕೊಂಡು ಬರುತ್ತಿದ್ದ ಮಹಿಳೆ ಹೃದಯಾಘಾತದಿಂದ ಸಾವು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget