ಕರಾವಳಿಕ್ರೈಂವೈರಲ್ ನ್ಯೂಸ್

ಬೆಳ್ತಂಗಡಿ: ಮನೆ ಬಾಗಿಲು ಮುರಿದು ಭಾರಿ ಪ್ರಮಾಣದ ನಗ-ನಾಣ್ಯ ಕಳ್ಳತನ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ನ್ಯೂಸ್ ನಾಟೌಟ್: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಬಾಗಿಲು ಮುರಿದು ಭಾರಿ ಪ್ರಮಾಣದ ನಗ-ನಾಣ್ಯವನ್ನು ಕಳ್ಳತನ ನಡೆಸಿರುವ ಪ್ರಕರಣ ಬೆಳ್ತಂಗಡಿಯಿಂದ ವರದಿಯಾಗಿದೆ. ಬೆಳ್ತಂಗಡಿ ನಿವಾಸಿ ಕುವೆಟ್ಟು ಗ್ರಾಮದ ಸುಲೈಮಾನ್ (56 ವರ್ಷ) ನೀಡಿರುವ ದೂರಿನ ಪ್ರಕಾರ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಭಾನುವಾರ (ಡಿ.೧೦) ಸಂಜೆ ಮನೆಯಲ್ಲಿ ಯಾರೂ ಇರಲಿಲ್ಲ. ಈ ವೇಳೆ ಮನೆಯೊಳಗೆ ಕಳ್ಳರ ತಂಡ ಮುಖ್ಯ ದ್ವಾರದ ಲಾಕ್ ಮುರಿದು ಒಳಕ್ಕೆ ಪ್ರವೇಶಿಸಿದೆ. ಬೆಡ್ ರೂಮಿನ ಗಾಡ್ರೇಜಿನ ಬಾಗಿಲು ಮುರಿದು ಒಟ್ಟು 69 ½ ಗ್ರಾಂ ತೂಕದ ಚಿನ್ನಾಭರಣ ಹಾಗೂ 40,000 ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ.

ಕಳುವಾದ ಬೆಲೆಬಾಳುವ ವಸ್ತುಗಳ ಒಟ್ಟು ಮೌಲ್ಯ 3,87,500 ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ 119/2023 ಕಲಂ;457,454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕಡಬ: ಕಾಡಿನೊಳಗಿಂದ ನೀರಿನಲ್ಲಿ ಹರಿದು ಬಂತು ಮಾನವನ ತಲೆಬುರುಡೆ

ಬಿಜೆಪಿ ಸೇರಿದರಾ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ? ಬಿಜೆಪಿ ಲೆಟರ್‌ಹೆಡ್‌ನಲ್ಲಿ ಬಯಲಾಯ್ತ ಕುಮಾರಸ್ವಾಮಿ ರಾಜಕೀಯ ನಡೆ?

ಶ್ರೀಮಂತ ಮನೆಯ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಫೋಟೋಗ್ರಾಫರ್..! ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕಿದ ಯುವತಿ ಮನೆಯವರು..!