ಬೆಂಗಳೂರುವೈರಲ್ ನ್ಯೂಸ್

ಮಗನ ಮೃತದೇಹ ಬೇಡವೆಂದು ಊರಿಗೆ ಹೊರಟ ತಾಯಿ..! ಕೇರಳದ ಕುಖ್ಯಾತ ಕಳ್ಳನ ಮೃತದೇಹ ಬೆಂಗಳೂರಿನಲ್ಲಿ ಪತ್ತೆ..!

ನ್ಯೂಸ್ ನಾಟೌಟ್: ತಾಯಿಯೊಬ್ಬಳು ಮಗ ಕಳ್ಳನೆಂದು ಮೃತದೇಹ ಸ್ವೀಕರಿಸಲು ನಿರಾಕರಿಸಿ, ವಾಪಸ್​ ಊರಿಗೆ ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುಖ್ಯಾತ ಕಳ್ಳ ವಿಷ್ಣು ಪ್ರಶಾಂತ್ ಮೃತ ಮಗ ಎಂದು ಗುರುತಿಸಲಾಗಿದೆ.

2024ರ ಡಿಸೆಂಬರ್ 24 ರಂದು ಕನಕಪುರ ರಸ್ತೆಯಲ್ಲಿರುವ ಫ್ಯಾಷನ್ ಫ್ಯಾಕ್ಟರಿ ಬೇಸ್ ಮೆಂಟ್ ​ನಲ್ಲಿ ಕೊಳೆತ ಸ್ಥಿತಿಯಲ್ಲಿ ಕುಖ್ಯಾತ ಕಳ್ಳ ವಿಷ್ಣು ಪ್ರಶಾಂತ್ ಶವ ಪತ್ತೆಯಾಗಿತ್ತು. ಈ ವಿಚಾರವನ್ನು ಫ್ಯಾಷನ್ ಫ್ಯಾಕ್ಟರಿ ಸಿಬ್ಬಂದಿ ಕೋಣನಕುಂಟೆ ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು.

ವಿಷ್ಣು ಪ್ರಶಾಂತ್ ಶವದ ಬಳಿ ಮೊಬೈಲ್ ಪತ್ತೆಯಾಗಿತ್ತು. ಪೊಲೀಸರು ಮೊಬೈಲ್​ ಅನ್ನು ಪರಿಶೀಲನೆಗೆ ಒಳಪಡಿಸಿದಾಗ ಕೇರಳದ ಓರ್ವ ವ್ಯಕ್ತಿಯದ್ದು ಎಂದು ತಿಳಿದಿತ್ತು. ಬಳಿಕ, ಪೊಲೀಸರು ಮೊಬೈಲ್‌ ಮಾಲೀಕನಿಗೆ ಕರೆ ಮಾಡಿ ವಿಚಾರಿಸಿದಾಗ “ನನ್ನ ಮೊಬೈಲ್ ಕಳ್ಳತನವಾಗಿದೆ” ಎಂದು ಹೇಳಿದ್ದಾರೆ. ನಂತರ, ಕೋಣನಕುಂಟೆ ಪೊಲೀಸರು ಮೃತ ವಿಷ್ಣು ಪ್ರಶಾಂತ್​ ಫೋಟೋವನ್ನು ಕೇರಳ ಪೊಲೀಸರಿಗೆ ಕಳುಹಿಸಿದ್ದಾರೆ. ಕೈಮೇಲೆ ಇದ್ದ ಟ್ಯಾಟೂ ಆಧಾರದ ಮೇಲೆ ಸತ್ತವನು ವಿಷ್ಣು ಪ್ರಶಾಂತ್ ಎಂದು ಖಾತ್ರಿಯಾಗಿದೆ.

ಕೇರಳ ಪೊಲೀಸರು ವಿಷ್ಣು ಪ್ರಶಾಂತ್ ತಾಯಿಗೆ ವಿಚಾರ ತಿಳಿಸಿದ್ದಾರೆ. ಆಗ, ತಾಯಿ ಮಗನನ್ನು ನೋಡಲು ಬೆಂಗಳೂರಿಗೆ ಬರಲು ನಿರಾಕರಿಸಿದ್ದಾರೆ. ಆಗ, ಕೋಣನಕುಂಟೆ ಪೊಲೀಸರು ಖಾತರಿಗಾಗಿ ವಿಷ್ಣು ಪ್ರಶಾಂತ್ ತಾಯಿಯನ್ನು ಬಲವಂತವಾಗಿ ಕರೆಸಿಕೊಂಡಿದ್ದಾರೆ. ಬೆಂಗಳೂರಿಗೆ ಬಂದ ವಿಷ್ಣು ಪ್ರಶಾಂತ್​ ತಾಯಿ “ಮೃತಪಟ್ಟವನು ನನ್ನ ಮಗ ವಿಷ್ಣು ಪ್ರಶಾಂತ್” ಎಂದು ಗುರುತು ಪತ್ತೆಹಚ್ಚಿದ್ದಾರೆ. ಬಳಿಕ, ಮಗನ ಮೃತದೇಹ ಬೇಡವೆಂದು ಕೇರಳಕ್ಕೆ ವಾಪಸ್​ ಹೋಗಿದ್ದಾರೆ ಎನ್ನಲಾಗಿದೆ.

ಬಳಿಕ‌ ಪೊಲೀಸರೇ ಅಂತ್ಯಕ್ರಿಯೆ ನರವೇರಿಸಿ, ತನಿಖೆ ಮುಂದುವರೆಸಿದ್ದಾರೆ. ವಿಷ್ಣು ಪ್ರಶಾಂತ್ ಹಿನ್ನೆಲೆಯನ್ನು ಪರಿಶೀಲಿಸಿದಾಗ ಆತನ‌ ಮೇಲೆ‌ ಕೇರಳ, ತಮಿಳುನಾಡು, ಕರ್ನಾಟಕ‌ ಸೇರಿದಂತೆ ಹಲವೆಡೆ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ಇರುವುದು ತಿಳಿದಿದೆ.

Related posts

ಕೈಕಾಲು ಕಟ್ಟಿದ ರೀತಿಯಲ್ಲಿ ಮಹಿಳೆಯ ಕೊಳೆತ ಶವ ಪತ್ತೆ..! ಆಕೆಯ ಕಿವಿಯೋಲೆ ಬಿಚ್ಚಿಟ್ಟ ಭಯಾನಕ ಸ್ಟೋರಿ ಇಲ್ಲಿದೆ

ಅಶ್ವಿನಿ ಪುನೀತ್‌ರಾಜಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್..! ಆ ಪೋಸ್ಟ್ ನಲ್ಲಿ ಅಂತದ್ದೇನಿತ್ತು..?

ಬಿಸಿಲಿಗೆ ರಸ್ತೆಯಲ್ಲೇ ಕುಸಿದು ಬಿದ್ದ ಬಿಜೆಪಿ ಸಂಸದ..! ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ..!