ಕರಾವಳಿ

ಹಾಸನ ಮೂಲದ ವೃದ್ದೆಗೆ ನೆರವಾದ ಕೊಕ್ಕಡದ ಯುವಕರು,ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಅಜ್ಜಿ

328

ನ್ಯೂಸ್ ನಾಟೌಟ್ : ಹಾಸನ ಮೂಲದ ವೃದ್ದೆಯೊಬ್ಬರು ಮನೆ ಬಿಟ್ಟು ತಪ್ಪಿಸಿಕೊಂಡು ಕೊಕ್ಕಡ ಪ್ರದೇಶದಲ್ಲಿ ಕಾಣಿಸಿಕೊಂಡ ಘಟನೆ ನಡೆದಿದೆ.ಅಜ್ಜಿಯ ಅಸಹಾಯಕತೆ ಕಂಡು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಯುವಕರ ಮನಮಿಡಿದಿದೆ.ಕೂಡಲೇ ಕೆಲ ಯುವಕರು ಸೇರಿ ಅಜ್ಜಿಗೆ ನೆರವಾದರು.

ಕೊಕ್ಕಡದಿಂದ ಸುಮಾರು ೪ ಕಿ.ಮೀ ದೂರವಿರುವ ಆಲಂಬಿಲ ಎಂಬಲ್ಲಿ ಹಾಸನದ ವೃದ್ಧೆಯೋರ್ವರು ಕಾಣಿಸಿಕೊಂಡಿದ್ದರು. ಅವರನ್ನು ವಿಚಾರಿಸಿದಾಗ ಮನೆ ಬಿಟ್ಟು ಬಂದು ದಾರಿ ತಪ್ಪಿಹೋಗಿರುವುದಾಗಿ ತಿಳಿದು ಬಂದಿದೆ.ಕಂಗಾಲಾಗಿದ್ದ ಅಜ್ಜಿಯನ್ನು ಯುವಕರ ತಂಡ ಯೋಗ್ಯ ಸ್ಥಳಕ್ಕೆ ಕರೆದುಕೊಂಡು ಹೋದರು.ವೃದ್ದೆಯ ಹೆಸರು ಬೋರಮ್ಮ ಎಂದು ತಿಳಿದುಬಂದಿದೆ.ಆದರೆ ಇವರು ಯಾವ ಕಾರಣದಿಂದ ಮನೆಬಿಟ್ಟು ಬಂದಿದ್ದಾರೆ.ಹಾಸನದಲ್ಲಿ ಇವರ ಮನೆ ಎಲ್ಲಿ ಅನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಕೊಕ್ಕಡದ ಪ್ರಸಾದ್ ಆಲಡ್ಕ, ಗ್ರಾ.ಪಂ ಅಧ್ಯಕ್ಷ ಯೋಗೀಶ್ ಆಲಂಬಿಲ, ದೀಪಕ್ ಎಂಬವರು ಪೊಲೀಸರಿಗೆ ವಿಷಯ ತಿಳಿಸಿದರು. ಕೂಡಲೇ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

See also  ಸುಳ್ಯ: ಹಳೆಗೇಟು 'ಗಣೇಶ ಚತುರ್ಥಿ' ಹೆಸರಿನಲ್ಲಿ ಮದ್ಯದ ಬಾಟಲಿಯ ಬಹುಮಾನದ ಲಕ್ಕಿ ಕೂಪನ್ : ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು,ವಿಚಾರಣೆ ವೇಳೆ ಯುವಕ ಹೇಳಿದ್ದೇನು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget