ದೇಶ-ಪ್ರಪಂಚ

ಒಂದೇ ವರ್ಷದಲ್ಲಿ 7 ಮಕ್ಕಳ ಪ್ರಾಣ ತೆಗೆದ ಬ್ರಿಟಿಷ್ ನರ್ಸ್, ಭಾರತೀಯ ಮೂಲದ ವೈದ್ಯನಿಂದ ಹಂತಕಿ ಸಿಕ್ಕಿಬಿದ್ದಿದ್ದೇಗೆ ?

ನ್ಯೂಸ್ ನಾಟೌಟ್ : ಆಸ್ಪತ್ರೆಗಳಲ್ಲಿ ನರ್ಸ್ ಗಳು ನವಜಾತ ಶಿಶುಗಳನ್ನು ಯಾವ ರೀತಿ ಆರೈಕೆ ಮಾಡಬೇಕು.ಹೇಗೆ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಹೇಳಿ ಕೋಡೋದರ ಬಗ್ಗೆ ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ನರ್ಸ್ ನವಜಾತ ಶಿಶುವನ್ನು ಕೊಂದು ಕಂಬಿ ಎಣಿಸುತ್ತಿದ್ದಾಳೆ.ಈಕೆ ಕೊಂದಿದ್ದು ಒಂದಲ್ಲ , ಎರಡಲ್ಲ ಬರೋಬ್ಬರಿ 7 ನವಜಾತಶಿಶುಗಳನ್ನು.

ಬ್ರಿಟಿಷ್‌ ನರ್ಸ್ ಮಹಿಳೆಯನ್ನು ಲೂಸಿ ಲೆಟ್ಬಿ ಎಂದು ಗುರುತಿಸಲಾಗಿದೆ. 2015ರ ಜೂನ್ ರಿಂದ 2016ರ ಜೂನ್ ನಡುವೆ ವಾಯವ್ಯ ಇಂಗ್ಲೆಂಡ್‌ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಈ ಸರಣಿ ಕೊಲೆಗಳನ್ನ ಮಾಡಿದ್ದಾಳೆ. ಕಳೆದ ಅಕ್ಟೋಬರ್‌ನಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಶುಕ್ರವಾರ ಈ ಕುರಿತು ವಿಚಾರಣೆ ನಡೆಸಿದ ಇಂಗ್ಲೆಂಡ್‌ನ ಕೋರ್ಟ್ (England Court) ಶಿಶುಹತ್ಯೆಯ ಆರೋಪಿ ನರ್ಸ್‌ಗೆ ಶಿಕ್ಷೆ ವಿಧಿಸಲು ಮುಂದಾಗಿದೆ. ಈಕೆಗೆ ಶಿಕ್ಷೆ ವಿಧಿಸಲು ಭಾರತೀಯ ಮೂಲದ ಮಕ್ಕಳ ವೈದ್ಯರ ಸಲಹೆಗಾರ ಡಾ. ರವಿ ಜಯರಾಮ್ ಸಹಕರಿಸಿದ್ದಾರೆ.

ಈಕೆ ಚಾಲಾಕಿ ಮಹಿಳೆ. ಈಕೆ ಕೈಯಿಂದ ಕೊಲೆಯಾದ ಹೆಚ್ಚಿನ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಏಕೆಂದರೆ ಲೂಸಿ ಲೆಟ್ಬಿ (33) ತನ್ನ ಆರೈಕೆಯಲ್ಲಿದ್ದ ಶಿಶುಗಳಿಗೆ ವಿಷಪೂರಿತ ಚುಚ್ಚುಮದ್ದು ನೀಡುತ್ತಿದ್ದಳು. ಜೊತೆಗೆ ಹಾಲಿನೊಂದಿಗೆ ವಿಷಪೂರಿತ ಲಿಕ್ವಿಡ್ ಬೆರಸಿ ಕೊಡುತ್ತಿದ್ದಳು.ಈಕೆ ಮಕ್ಕಳಿಗೆ ಚಿತ್ರಹಿಂಸೆ ನೀಡಿ ಜೊತೆಗೆ ಮಕ್ಕಳನ್ನ ಉಸಿರುಗಟ್ಟಿಸಿ ಕೊಂದಿದ್ದಾಳೆ ಎಂದು ಪ್ರಾಸಿಕ್ಯೂಟರ್‌ಗಳು ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ಗೆ ತಿಳಿಸಿದ್ದಾರೆ.

ಮೊದಲಬಾರಿಗೆ 2015 ರಲ್ಲಿ ನರ್ಸ್ ನ ಈ ಕೃತ್ಯ ಬೆಳಕಿಗೆ ಬಂದಿತ್ತು. ಅದೇ ವರ್ಷ ಮೂವರು ಮಕ್ಕಳು ಸಾವನ್ನಪ್ಪಿದ್ದವು. ಬಳಿಕ ಏಪ್ರಿಲ್ 2017 ರಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ಟ್ರಸ್ಟ್, ಪೊಲೀಸರು ವೈದ್ಯರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ನಂತರ ಪ್ರಕರಣದ ತನಿಖೆ ಮುಂದುವರಿಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2018 ಮತ್ತು ನವೆಂಬರ್ 2020ರ ನಡುವೆ ನರ್ಸ್ ಅನ್ನು ಮೂರು ಬಾರಿ ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು.

ಇದೊಂದು ಬೆಚ್ಚಿಬೀಳಿಸುವ ಪ್ರಕರಣವಾಗಿದ್ದು, ಈ ಹಿಂದೆಯೂ ಕೂಡ ಡಾಕ್ಟರ್ ಹೆರಾಲ್ಡ್ ಶಿಪ್‌ಮನ್ ಮತ್ತು ನರ್ಸ್ ಬೆವರ್ಲಿ ಅಲಿಟ್ ಎಂಬವರು ಇಂತಹದ್ದೇ ಕುಕೃತ್ಯ ಎಸಗಿದ್ದರು. ಶಿಪ್‌ಮನ್ 2004ರಲ್ಲಿ 15 ರೋಗಿಗಳನ್ನ ಕೊಂದಿದ್ದ. ಆಗ ಆತನಿಕೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದ್ರೆ ಅವನು ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಚೆಸ್ಟರ್‌ನಲ್ಲಿರುವ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ಸಲಹೆಗಾರ ಡಾ ರವಿ ಜಯರಾಂ, ಶುಕ್ರವಾರ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಿಂದ ನರ್ಸ್ ಲೂಸಿ ಲೆಟ್ಬಿ ತಪ್ಪಿತಸ್ಥರೆಂದು ಸಾಬೀತಾಗುವ ಮೊದಲು ಮಾಜಿ ಸಹೋದ್ಯೋಗಿ ಮತ್ತು ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು. ಬದುಕಿದ್ದರೆ… ಮಕ್ಕಳು ಶಾಲೆಗೆ ಹೋಗುತ್ತಿದ್ದರು ಎಂದು ನ್ಯಾಯಾಲಯವು ನರ್ಸ್‌ಗೆ ಶಿಕ್ಷೆ ವಿಧಿಸಿದ ನಂತರ ಜಯರಾಂ ಹೇಳಿದರು.

Related posts

ಒಂದೇ ದಿನ ಬೆಂಗಳೂರಿನಲ್ಲಿ 374 ಜನರಿಗೆ ವಿಮಾನ ಮಿಸ್..! ಪರದಾಡಿದ ಪ್ರಯಾಣಿಕರು, ಕಾರಣವೇನು..?

ಗರ್ಭಿಣಿ ಮಗಳನ್ನು ಕಾಡಿಗೆ ಕರೆದೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಹೆತ್ತಬ್ಬೆ..!ಘಟನೆಗೆ ಕಾರಣವೇನು?ಪೊಲೀಸರು ಹೇಳಿದ್ದೇನು?

ಇಂದು(ಎ.20) ಮತ್ತೆ ಮೋದಿ ಕರ್ನಾಟಕಕ್ಕೆ ಆಗಮನ, 50 ಸಾವಿರ ಆಸನಗಳ ವ್ಯವಸ್ಥೆ, 450 ಪೊಲೀಸರಿಂದ ಬಂದೋಬಸ್ತ್