ಕರಾವಳಿಪುತ್ತೂರು

ಭವಿಷ್ಯದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುವಾಗಿ ಬೆಳಗಬೇಕಾಗಿದ್ದ ಪ್ರತಿಭೆ ಇನ್ನಿಲ್ಲ,ಕೀಟನಾಶಕ ಸೇವನೆ, ಚಿಕಿತ್ಸೆ ಫಲಿಸದೇ ಕೊನೆಯುಸಿರು..!

207

ನ್ಯೂಸ್ ನಾಟೌಟ್ :ಪ್ರತಿಭಾನ್ವಿತ ಕ್ರೀಡಾಪಟು ಹಾಗೂ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕೀಟನಾಶಕ ಸೇವಿಸಿ ಚಿಕಿತ್ಸೆ ಪಡೆದಿದ್ದು,ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ ಘಟನೆ ಪುತ್ತೂರಿನಿಂದ ವರದಿಯಾಗಿದೆ.

ನಿಶಾ (17) ಉಸಿರು ಚೆಲ್ಲಿದ ವಿದ್ಯಾರ್ಥಿನಿಯೆಂದು ತಿಳಿದು ಬಂದಿದೆ. ಈಕೆ ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಸಂಪ್ಯ ಬೈಲಾಡಿ ನಿವಾಸಿ ಮಂಜಪ್ಪ ಗೌಡರ ಪುತ್ರಿ ಎಂದು ಗುರುತಿಸಲಾಗಿದೆ.ಈಕೆ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಹೇಳಲಾಗಿದೆ.ಕಳೆದ ಹದಿನೈದು ದಿನಗಳ ಹಿಂದೆ ಬಿಹಾರದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ (ಓಟ ಸ್ಪರ್ಧೆ) ಭಾಗವಹಿಸಿದ್ದಳು.ಈ ವೇಳೆ ಅಲ್ಲಿ ಯಾವುದೇ ಬಹುಮಾನ ದೊರೆಯದೇ ಹಿಂತಿರುಗಿ ಮನೆಗೆ ಬಂದವಳು ಬೇಸರದಲ್ಲಿದ್ದಳು ಎನ್ನಲಾಗಿದೆ.

ಆದರೆ ನ.14 ರಂದು ವಿಪರೀತವಾಗಿ ವಾಂತಿ ಮಾಡುತ್ತಿರುವುದನ್ನು ಗಮನಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇದರಿಂದ ಅಸ್ವಸ್ಥಳಾದವಳನ್ನು ಈ ಬಗ್ಗೆ ವಿಚಾರಿಸಿದಾಗ ನ.13 ರಂದು ಸಂಜೆ ತೋಟಕ್ಕೆ ಬೀಡುವ ಕೀಟನಾಶಕವನ್ನು ಸೇವಿಸಿರುವುದಾಗಿ ತಿಳಿಸಿದ್ದಾಳೆ.ಆರೋಗ್ಯ ಸ್ಥಿತಿ ಹದಗೆಟ್ಟ ಈಕೆಯನ್ನು ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರಲ್ಲಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ಕರೆದುಕೊಂಡು ಹೋಗಲಾಯಿತು. ನಿಶಾಳನ್ನು ಪರೀಕ್ಷಿಸಿ ಒಳ ರೋಗಿಯನ್ನಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನ.25 ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೇ ನಿಶಾ ಬಿ ಎಮ್ ರವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಬಬ್ಬುಸ್ವಾಮಿ ದೈವಸ್ಥಾನದ ಹುಂಡಿಯ ಹಣ ಕದ್ದು ವ್ಯಕ್ತಿ ಪರಾರಿ..! ಪವಾಡವೆಂಬಂತೆ ಬಸ್ ಸಿಗದೆ ನಿಲ್ದಾಣದಲ್ಲೇ ಮಲಗಿದ ಕಳ್ಳ..! 24 ಗಂಟೆಯೊಳಗೆ ಹಿಡಿದುಕೊಟ್ಟ ದೈವ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget