ಕರಾವಳಿಸುಳ್ಯ

ಕಾಡಾನೆಗಳ ದಾಳಿಯಿಂದ ಬೇಸತ್ತು ಅರಣ್ಯ ಸಚಿವರ ಮೊರೆ ಹೋದ ಸಂಪಾಜೆ ಕಾಂಗ್ರೆಸ್ ನಿಯೋಗ, ಶೀಘ್ರವೇ ಸಂಪಾಜೆಗೆ ಬರುತ್ತೇನೆಂದು ಭರವಸೆಯಿತ್ತ ಅರಣ್ಯ ಸಚಿವ ಈಶ್ವರ್ ಖಂಡ್ರೆ

ನ್ಯೂಸ್ ನಾಟೌಟ್: ಸಂಪಾಜೆ ಸುತ್ತಮುತ್ತಲಿನ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಜನ ನೆಮ್ಮದಿಯಿಂದ ನಿದ್ರೆ ಮಾಡಲಾಗದ ಪರಿಸ್ಥಿತಿಗೆ ಬಂದು ತಲುಪಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಂಪಾಜೆ ಗ್ರಾಮದ ಕಾಂಗ್ರೆಸ್ ನಿಯೋಗ ನೇರವಾಗಿ ಅರಣ್ಯ ಸಚಿವರನ್ನೇ ಭೇಟಿಯಾಗಿ ತಕ್ಷಣ ಸ್ಪಂದಿಸುವಂತೆ ಮನವಿ ಮಾಡಿದೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅರಣ್ಯ ಸಚಿವರು ಶೀಘ್ರದಲ್ಲೇ ಸಂಪಾಜೆಗೆ ಆಗಮಿಸಿ ಪರಿಶೀಲನೆ ನಡೆಸುವ ಭರವಸೆಯನ್ನು ನೀಡಿದ್ದಾರೆ. ಸಂಪಾಜೆ ಗ್ರಾಮದಲ್ಲಿ ಸೋಲಾರ್ ಬೇಲಿ ಅಳವಡಿಕೆ, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ಹಲವು ಮಹತ್ವದ ವಿಚಾರವನ್ನು ಕೂಡ ಇದೇ ವೇಳೆ ಸಚಿವರ ಗಮನಕ್ಕೆ ತರಲಾಯಿತು. ಕೆಪಿಸಿಸಿ ವಕ್ತಾರ ಟಿ. ಎಂ. ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೋ, ಯುವ ಕಾಂಗ್ರೆಸ್ ಮುಖಂಡ ರಂಜಿತ್ ರೈ ಮೇನಾಲ, ಸಲೀಂ ಪೆರುಂಗೋಡಿ, ಉನೈಸ್ ಗೂನಡ್ಕ,, ಸೌಕತ್ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.

Related posts

ಎಲ್ಲ ಹಿಂದು ಯುವಕರ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿ: ಶರಣ್ ಪಂಪ್‌ವೆಲ್

ಗೂಗಲ್‌ ಮ್ಯಾಪ್‌ ಬಳಸಿ ತೆರಳುತ್ತಿದ್ದ ಕಾರು ಕಾಲುವೆಗೆ..! ನಾಲ್ವರು ಪ್ರಯಾಣಿಕರಿದ್ದ ಕಾರು ಮುಂದೇನಾಯ್ತ..?

ಕೆಲವೇ ನಿಮಿಷಗಳಲ್ಲಿ ನಾಮಪತ್ರ ಸಲ್ಲಿಸಲಿರುವ ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್,ಅದ್ದೂರಿ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ