Latestಭಕ್ತಿಭಾವ

ಮೂಲ್ಕಿ:ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವರ ಉತ್ಸವ ವೇಳೆ ರಥದ ಮೇಲ್ಭಾಗ ಕುಸಿತ!!ಆಗಿದ್ದೇನು?

760
Spread the love

ನ್ಯೂಸ್ ನಾಟೌಟ್ : ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಸಾವಿರಾರು ಭಕ್ರು ನೆರೆದಿದ್ದರು. ದೇಗುಲದಲ್ಲಿ ಸಂಭ್ರಮದ ಮುಗಿಲು ಮುಟ್ಟಿತ್ತು. ಈ ಮಧ್ಯೆ ಬ್ರಹ್ಮರಥೋತ್ಸವ ವೇಳೆ ದೇವರ ತೇರು ಮುರಿದು ಬಿದ್ದಿದ್ದು ಎಲ್ಲರನ್ನು ಆತಂಕಕ್ಕೊಳಗಾಗುವಂತೆ ಮಾಡಿದೆ. ಈ ಘಟನೆ ಏ.೧೮ರ ತಡರಾತ್ರಿ ಅಂದರೆ ಶನಿವಾರ ಬೆಳಗ್ಗಿನ ಜಾವ ಸುಮಾರು 1.40 ರಿಂದ 2 ಗಂಟೆ ವೇಳೆ ನಡೆದಿದೆ.

ಬ್ರಹ್ಮರಥೋತ್ಸವ ತೇರಿನ ಮೇಲ್ಭಾಗ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಅರ್ಚಕರು ತೇರಿನಲ್ಲೇ ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ದೊರೆತಿದೆ. ಈ ಘಟನೆಯಿಂದಾಗಿ ಭಕ್ತ ಸಮೂಹವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತು. ಬಳಿಕ ದೇವರ ಉತ್ಸವವನ್ನು ಚಂದ್ರ ಮಂಡಲ ರಥದಲ್ಲಿ ದೇವರ ಉತ್ಸವ ಮುಂದುವರಿಸಲಾಯಿತು ಎಂದು ಹೇಳಲಾಗಿದೆ.

 

 

See also  ಶೌಚಾಲಯದ ನೀರಿನ ಮಾರಾಟದಿಂದ 300 ಕೋಟಿ ರೂ. ಸಂಪಾದನೆ..! ಶಾಕಿಂಗ್ ಮಾಹಿತಿ ನೀಡಿದ ಕೇಂದ್ರ ಸಚಿವ ಗಡ್ಕರಿ..!
  Ad Widget   Ad Widget   Ad Widget   Ad Widget   Ad Widget   Ad Widget