ಕ್ರೈಂದೇಶ-ವಿದೇಶ

ಕಾಡುಗಳ್ಳ ವೀರಪ್ಪನ್ ನನ್ನು ಗುಂಡಿಕ್ಕಿ ಕೊಂದ ಪೊಲೀಸ್ ಅಧಿಕಾರಿ ಸಸ್ಪೆಂಡ್..! ನಿವೃತ್ತಿಯ ಒಂದು ದಿನ ಮೊದಲೇ ಅಮಾನತು ಆಗಿದ್ದೇಗೆ..?

ನ್ಯೂಸ್ ನಾಟೌಟ್: ನರಹಂತಕ, ಕಾಡುಗಳ್ಳ ವೀರಪ್ಪನ್ ಅನ್ನು ಗುಂಡಿಕ್ಕಿ ಕೊಂದ ‘ಎನ್ ಕೌಂಟರ್ ಸ್ಪೆಷಲಿಸ್ಟ್ ‘ತಮಿಳುನಾಡಿನ ತಿರುವಣ್ಣಾಮಲೈ ಎಡಿಎಸ್ಪಿ ಎಸ್ ವೆಲ್ಲದುರೈ ಅವರು ತಮ್ಮ ಸೇವಾ ನಿವೃತ್ತಿಯ ಒಂದು ದಿನಕ್ಕೂ ಮೊದಲೇ ಅಮಾನತುಗೊಂಡಿದ್ದಾರೆ. ತಮಿಳುನಾಡು ಗೃಹ ಇಲಾಖೆಯೇ ಅಮಾನತು ಮಾಡಿರುವುದು ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ.

ಎನ್ ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತರಾಗಿದ್ದ ಅವರನ್ನು ಅಮಾನತು ಮಾಡಿರುವುದರ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ 2013ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ‘ಕೊಕ್ಕಿ’ ಕುಮಾರ್ ಅಲಿಯಾಸ್ ರಾಮು ಎಂಬಾತನ ಲಾಕಪ್ ಡೆತ್ ಪ್ರಕರಣದಲ್ಲಿ ವೆಲ್ಲಾದುರೈ ಭಾಗಿಯಾಗಿದ್ದರು ಎಂದು ಆರೋಪಿಸಿ ಗುರುವಾರ ಅಮಾನತುಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶುಕ್ರವಾರದ ನಂತರದ ಆದೇಶದಲ್ಲಿ ಇಲಾಖೆ ಕೆಲವು ಷರತ್ತುಗಳಿಗೆ ಒಳಪಟ್ಟು ನಿವೃತ್ತಿಗೆ (ಅಮಾನತು ಹಿಂಪಡೆದು) ಅವಕಾಶ ನೀಡಿದೆ. ಅಲ್ಲದೇ ವೆಲ್ಲಾದುರೈ ಅವರ ನಿವೃತ್ತಿ ಫಂಡ್ ನಲ್ಲಿ 5 ಲಕ್ಷ ರೂ. ಕಡಿತಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ.

ಅಕ್ಟೋಬರ್ 27, 2012 ರಂದು ಮರುತುಪಾಂಡಿಯಾರ್ ಜಯಂತಿಯ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಟಿ.ಅಲ್ವಿನ್ ಸುಧನ್ ಅವರನ್ನು ಕೊಂದ ಪ್ರಕರಣದಲ್ಲಿ ‘ಕೊಕ್ಕಿ’ ಕುಮಾರ್ ಆರೋಪಿಯಾಗಿದ್ದ. ಪ್ರಕರಣದಲ್ಲಿ ‘ಕೊಕ್ಕಿ’ ಕುಮಾರ್ ಸೇರಿದಂತೆ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಸಿಬಿ-ಸಿಐಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಬಿಡುವಂತೆ ಶಿಫಾರಸು ಮಾಡಿತ್ತು.

2021ರಲ್ಲಿ ಡಿಎಂಕೆ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಕಾಂಚೀಪುರಂ ಜಿಲ್ಲೆಯ ಕೈಗಾರಿಕಾ ಘಟಕಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿದ ಸಮಾಜವಿರೋಧಿಗಳ ಮೇಲೆ ನಿಗಾ ವಹಿಸಲು ಮತ್ತು ನಿಯಂತ್ರಿಸಲು ತಮಿಳುನಾಡು ಸರ್ಕಾರವು ವೆಲ್ಲಾದುರೈ ಅವರನ್ನು ರಾಜ್ಯ ಪೊಲೀಸ್ ವಿಶೇಷ ವಿಭಾಗದ ವಿಶೇಷ ಅಧಿಕಾರಿಯಾಗಿ ನೇಮಿಸಿತ್ತು.

Related posts

ಜಾರಿ ನಿರ್ದೇಶನಾಲಯ ಅಧಿಕಾರಿಗಳೇ ಲಂಚಕ್ಕೆ ಬೇಡಿಕೆ ಇಟ್ಟರಾ..? ರೆಡ್‌ಹ್ಯಾಂಡಾಗಿ ಅರೆಸ್ಟ್‌ ಆದ ಇಡಿ ಅಧಿಕಾರಿಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಹೇಳಿದ್ದೇನು?

ಉಡುಪಿ: ರೈಲ್ವೆ ಬೋಗಿಯಲ್ಲಿ ಯುವಕನ ಮೃತದೇಹ ಪತ್ತೆ..! ಈ ಬಗ್ಗೆ ಪೊಲೀಸರು ಹೇಳಿದ್ದೇನು..?

ನಿವೃತ್ತ ಶಿಕ್ಷಕರ ಮನೆಯಲ್ಲಿ ನಗದು, ಚಿನ್ನಾಭರಣ ಕದ್ದು ಪತ್ರ ಬರೆದಿಟ್ಟು ಹೋದ ಕಳ್ಳ..! ಪತ್ರ ನೋಡಿ ಪೊಲೀಸರೇ ಶಾಕ್..! ಅದರಲ್ಲಿ ಅಂತದ್ದೇನಿತ್ತು..?