ಕರಾವಳಿಪುತ್ತೂರು

ಬೆಳ್ತಂಗಡಿ: ಸಾವಿರಾರು ಮೀನುಗಳ ಮಾರಣ ಹೋಮ

288

ನ್ಯೂಸ್‌ನಾಟೌಟ್‌: ಬೆಳ್ತಂಗಡಿ ನಗರಕ್ಕೆ ಪ್ರಮುಖ ಕುಡಿಯುವ ನೀರಿನ ಆಶ್ರಯವಾಗಿದ್ದ ಸೋಮಾವತಿ ನದಿ ನೀರಿಗೆ ಕಿಡಿಗೇಡಿಗಳು ವಿಷ ಹಾಕಿದ ಕಾರಣ ಸಾವಿರಾರು ಮೀನುಗಳು ಸತ್ತುಬಿದ್ದ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ನಗರಕ್ಕೆ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು, ಇದೇ ನೀರನ್ನು ಅವಲಂಬಿಸಲಾಗಿತ್ತು. ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಮೂರು ವರ್ಷ ಹಿಂದೆ ಇದೇ ಸ್ಥಳದಲ್ಲಿ ಈ ರೀತಿಯ ಕೃತ್ಯ ನಡೆಸಲಾಗಿತ್ತು. ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಪಟ್ಟಣ ಪಂಚಾಯತ್ ಕೃತ್ಯದ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

See also  ವಿಟ್ಲ: ಅಕ್ರಮ ಜುಗಾರಿ ಆಟಕ್ಕೆ ಅಧಿಕಾರಿಯೇ ಸಾಥ್ , ಕರ್ತವ್ಯಲೋಪಕ್ಕೆ ಪೊಲೀಸ್ ಅಧಿಕಾರಿ ಅಮಾನತು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget