ಕ್ರೈಂವಿಡಿಯೋವೈರಲ್ ನ್ಯೂಸ್

ತಲೆಕೆಳಗಾದ ದರೋಡೆಕೋರರ ಪ್ಲಾನ್..! ದಂಪತಿಯ ದೈರ್ಯಕ್ಕೆ ಎಲ್ಲೆಡೆ ಪ್ರಶಂಸೆ… ಇಲ್ಲಿದೆ ವೈರಲ್ ವಿಡಿಯೋ

299

ನ್ಯೂಸ್ ನಾಟೌಟ್ : ಕಳ್ಳರು, ಪುಂಡರು ಮತ್ತು ದುಷ್ಕರ್ಮಿಗಳು ಯಾವಾಗಲೂ ಅವರ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಅವಕಾಶವನ್ನು ಹುಡುಕುತ್ತಿರುತ್ತಾರೆ. ಬೈಕ್ ನಲ್ಲಿ ಬಂದ ಇಬ್ಬರು ಸರಗಳ್ಳರು ದಂಪತಿಯನ್ನು ದರೋಡೆ ಮಾಡಲು ಯತ್ನಿಸುತ್ತಿರುವಾಗ ಅದು ರೋಚಕ ತಿರುವು ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಲ್ಲಿ ನಡೆದದ್ದಾದ್ರೂ ಏನು?

ವೈರಲ್ ವೀಡಿಯೊದಲ್ಲಿ, ದಂಪತಿಗಳು ಖಾಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು, ಈ ವೇಳೆ ಇದ್ದಕ್ಕಿದ್ದಂತೆ ಮತ್ತೊಂದು ದಿಕ್ಕಿನಿಂದ ಬೈಕ್ ನಲ್ಲಿ ಇಬ್ಬರು ದರೋಡೆಕೋರರು ಈ ದಂಪತಿಗಳ ಹತ್ತಿರ ಬರುತ್ತಾರೆ. ನಂತರ ತಕ್ಷಣ ಬೈಕ್ ನಿಂದ ಇಳಿದ ಓರ್ವ ವ್ಯಕ್ತಿ ಮಹಿಳೆಯಿಂದ ಏನನ್ನೊ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ.

ದಂಪತಿಗಳು ಸ್ವಲ್ಪ ಸಮಯದವರೆಗೆ ಏನಾಗುತ್ತದೆ ಎಂದು ತಿಳಿದುಕೊಳ್ಳುತ್ತಾ ಸ್ಥಬ್ತರಾದರು ಮತ್ತು ಗಾಬರಿಗೊಂಡರು, ತಕ್ಷಣ ಕಿರುಚಿಕೊಂಡ ಮಹಿಳೆ ತನ್ನ ಸಂಗಾತಿಗೆ ಅವರನ್ನು ಹಿಡಿಯುವಂತೆ ಕರೆಯುತ್ತಾಳೆ. ತಕ್ಷಣ ಹುಡುಗ ತನ್ನ ಬಲವನ್ನೆಲ್ಲಾ ಹಾಕಿ ದರೋಡೆಕೋರನ ಮೇಲೆ ದಾಳಿ ನಡೆಸುತ್ತಾನೆ. ಸಿಕ್ಕ – ಸಿಕ್ಕಂತೆ ಅಟ್ಟಾಡಿಸಿ ಹೊಡೆಯುತ್ತಿರುವಾಗ ಇನ್ನೊಬ್ಬ ಸಾರ್ವಜನಿಕ ವ್ಯಕ್ತಿ ಅಲ್ಲಿಗೆ ದಾವಿಸುತ್ತಾರೆ, ಇದರಿಂದ ಹೆದರಿದ ಇನ್ನೊಬ್ಬ ಕಳ್ಳ ಬೈಕ್ ನಲ್ಲಿ ತನ್ನ ಸಂಗಡಿಗನನ್ನು ಕೂಡ ಬಿಟ್ಟು ಓಡುತ್ತಾನೆ.

ಈ ದಂಪತಿಯ ಕೆಚ್ಚೆದೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ನಿರ್ಜನ ಪ್ರದೇಶಗಳ ಮೂಲಕ ಹಾದುಹೋಗುವಾಗ, ವಿಶೇಷವಾಗಿ ರಾತ್ರಿಯ ವೇಳೆ ನಾವು ಅತ್ಯಂತ ಜಾಗರೂಕರಾಗಿರಬೇಕು.

See also  ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: KSCA ಹುದ್ದೆಗೆ ಇಬ್ಬರು ಪದಾಧಿಕಾರಿಗಳು ರಾಜೀನಾಮೆ..! ಸಿಐಡಿ ಯಿಂದ ತನಿಖೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget