ಕರಾವಳಿಕೊಡಗು

ಪಿಕಪ್ ವಾಹನದೊಳಗೆ ನುಗ್ಗಿದ ಮರದ ದಿಮ್ಮಿ,ಅದೃಷ್ಟವಶಾತ್ ಪಾರಾದ ಚಾಲಕ

451

ನ್ಯೂಸ್ ನಾಟೌಟ್ : ಮರದ ದಿಮ್ಮಿಯೊಂದು ಲಾರಿಯಿಂದ ಜಾರಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಪಿಕ್‌ಅಪ್ ವಾಹನಕ್ಕೆ ಗುದ್ದಿ ಗಾಜು ಸೀಳಿ ಒಳಹೊಕ್ಕ ಘಟನೆ ಸಂಪಾಜೆ ರಸ್ತೆಯ ಜೋಡುಪಾಲ ಸಮೀಪ ನಡೆದಿದೆ.ನಿನ್ನೆ ರಾತ್ರಿ ವೇಳೆ 14 ಚಕ್ರದ ಲಾರಿಯೊಂದರಲ್ಲಿ ಭಾರೀ ಗಾತ್ರದ ಮರದ ದಿಮ್ಮಿಗಳನ್ನು ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಏನಿದು ಘಟನೆ?

ಟಿಂಬರ್ ಸಾಗಾಟದ ವೇಳೆ ಈ ಘಟನೆ ಸಂಭವಿಸಿದೆ.ಜೋಡುಪಾಲ ಸಮೀಪ ಬರುತ್ತಿದ್ದಂತೆ ಮರದ ದಿಮ್ಮಿಗಳಿಗೆ ಕಟ್ಟಲ್ಪಟ್ಟಿದ್ದ ಹಗ್ಗ ತುಂಡಾಗಿ ದಿಮ್ಮಿಗಳು ಕೆಳಗೆ ಬೀಳಲಾರಂಬಿಸಿವೆ.ಈ ವೇಳೆ ಜೋಡುಪಾಲದಿಂದ ಮದೆನಾಡು ಕಡೆಗೆ ಬರುತ್ತಿದ್ದ ಪಿಕ್‌ಅಪ್ ವಾಹನಕ್ಕೆ ಮರದ ದಿಮ್ಮಿಯೊಂದು ಅಪ್ಪಳಿಸಿದೆ.ಪರಿಣಾಮ ಮರದ ದಿಮ್ಮಿಯೊಂದು ಗಾಜು ಸೀಳಿ ಒಳಹೊಕ್ಕಿದೆ. ಅದೃಷ್ಟವಶಾತ್ ಚಾಲಕ ಪಾರಾಗಿದ್ದಾನೆ.ಘಟನೆಯಲ್ಲಿ ಪಿಕ್‌ಅಪ್ ವಾಹನ ಜಖಂಗೊಂಡಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಕಾರಣಿಕ ಕ್ಷೇತ್ರ ಪಲ್ಲತ್ತಡ್ಕ ಹೊಸಮ್ಮ ದೈವದ ನೇಮೋತ್ಸವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget