ಕ್ರೀಡೆ/ಸಿನಿಮಾವೈರಲ್ ನ್ಯೂಸ್

‘ದ ಕೇರಳ ಸ್ಟೋರಿ’ ಸಿನಿಮಾ ನೋಡಲು ಅರ್ಧ ದಿನ ರಜೆ ಕೊಟ್ಟ ಪ್ರಾಂಶುಪಾಲರು! ಅಧ್ಯಾಪಕರು ತಹಶೀಲ್ದಾರ್‌ಗೆ ಬರೆದ ಪತ್ರದಲ್ಲೇನಿತ್ತು?

325

ನ್ಯೂಸ್ ನಾಟೌಟ್ :  ಮೇ 24ರಂದು ಕಾಲೇಜಿಗೆ ಅರ್ಧದಿನ ರಜೆ ಕೊಟ್ಟು ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಣೆಗೆ ಹೋಗುವಂತೆ ವಿಜಯ ಮಹಾಂತೇಶ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು ಬಾಗಲಕೋಟೆಯ ಇಳಕಲ್‌ ನಲ್ಲಿ ಸೂಚಿಸಿದ ಘಟನೆ ನಡೆದಿದೆ. ಈ ಕುರಿತು ವಿರೋಧ ವ್ಯಕ್ತವಾಗುತ್ತಿದ್ದಂತೆ ರಜೆ ರದ್ದುಪಡಿಸಿ ಕ್ಷಮಾಪಣೆ ಕೇಳಿದ್ದಾರೆ ಎನ್ನಲಾಗಿದೆ.

ಶ್ರೀನಿವಾಸ ಚಿತ್ರಮಂದಿರದಲ್ಲಿ ಬುಧವಾರ ಮಧ್ಯಾಹ್ನ 12ರಿಂದ 3ರವರೆಗೆ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಉಚಿತ ಪ್ರದರ್ಶನವಿದ್ದು, ವಿದ್ಯಾರ್ಥಿನಿಯರು ಹೋಗಿ ವೀಕ್ಷಿಸಬೇಕು. ಅದಕ್ಕಾಗಿ ಮಧ್ಯಾಹ್ನದ ಅವಧಿಯ ತರಗತಿಗಳನ್ನು ರದ್ದುಪಡಿಸಲಾಗಿದೆʼ ಎಂದು ಅಧ್ಯಾಪಕ ಡಾ.ಕೆ.ಸಿ. ದಾಸ್‌ ನೀಡಿದ್ದ ಸೂಚನಾ ಪತ್ರವನ್ನು ಕಾಲೇಜಿನ ಫಲಕದಲ್ಲಿ ಮಂಗಳವಾರ ಅಂಟಿಸಲಾಗಿತ್ತು. 

ಸ್ಟುಡೆಂಟ್ಸ್‌ ಇಸ್ಲಾಮಿಕ್ ಆರ್ಗನೈಸೇಶನ್‌ ಆಫ್‌ ಇಂಡಿಯಾದ (ಎಸ್‌ಐಒ) ಇಳಕಲ್‌ ಘಟಕದ ಅಧ್ಯಕ್ಷ ಆಸೀಫ್ ಹುಣಚಗಿ ಕಾಲೇಜಿಗೆ ತೆರಳಿ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.

ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಪ್ರಾಚಾರ್ಯರು ನೋಟಿಸ್‌ ಹಿಂಪಡೆದಿದ್ದಾರೆ. ಈ ಕುರಿತು ತಹಶೀಲ್ದಾರ್‌ಗೆ ಪತ್ರ ಬರೆದಿರುವ ಪ್ರಾಚಾರ್ಯ ದಾಸ್‌, ‘ಚಲನಚಿತ್ರ ವೀಕ್ಷಿಸುವಂತೆ ವಿದ್ಯಾರ್ಥಿನಿಯರಿಗೆ ನೀಡಿದ್ದ ಸೂಚನೆ ಹಿಂಪಡೆದಿದ್ದೇನೆ. ತರಗತಿಗಳು ಎಂದಿನಂತೆ ನಡೆಯುತ್ತವೆ. ಚಲನಚಿತ್ರ ನೋಡುವಂತೆ ತಿಳಿಸಿದ್ದಕ್ಕೆ ಹಾಗೂ ತರಗತಿಗಳನ್ನು ರದ್ದು ಪಡಿಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.

See also  ಕಟೀಲು ದೇವಾಲಯಕ್ಕೆ ಬಂದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ, ದೇವಿಗೆ ವಿಶೇಷ ಪೂಜೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget