ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಗೆಳೆಯರ ಮಧ್ಯೆ ಗಲಾಟೆ! ಅತ್ಯಾಚಾರ ಪ್ರಕರಣ ದಾಖಲಿಸಿದ ಯುವತಿ! ಗೆಳೆಯ ಅರೆಸ್ಟ್..!

209

ನ್ಯೂಸ್ ನಾಟೌಟ್ :  ತನ್ನ ಗೆಳತಿಯ ಮೇಲೆ ಅತ್ಯಾಚಾರ ಎಸಗಿ ಮತಾಂತರಕ್ಕೆ ಒತ್ತಡ ಹೇರಿದ್ದಕ್ಕಾಗಿ ಮಧ್ಯಪ್ರದೇಶದ ಇಂದೋರ್‌ನಲ್ಲಿ 23 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ತನ್ನ ಗೆಳತಿಯ ಮೇಲೆ ಅತ್ಯಾಚಾರ ಎಸಗಿ ಮತಾಂತರಕ್ಕೆ ಒತ್ತಡ ಹೇರಿದ ಆರೊಪದ ಮೇಲೆ ಮಧ್ಯಪ್ರದೇಶದ ಇಂದೋರ್‌ನಲ್ಲಿ 23 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ ಯುವಕ-ಯುವತಿ ಜಗಳ ಮಾಡಿಕೊಂಡಿದ್ದು, ಬಳಿಕ ಯುವತಿ ದೂರು ನೀಡಲು ಮುಂದಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲವಂತದ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಕಾನೂನಿನಡಿಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಇಂದೂರ್ ನ ಖಜ್ರಾನಾ ಪೊಲೀಸ್ ಠಾಣೆ ಪ್ರಭಾರಿ ದಿನೇಶ್ ವರ್ಮಾತಿಳಿಸಿದ್ದಾರೆ.
ಅವರಿಬ್ಬರೂ ಆಪ್ತರಾದ ನಂತರ ಒಟ್ಟಿಗೆ ಇರಲು ಶುರು ಮಾಡಿದ್ದರು, ಆದರೆ ಆ ಯುವಕ ತನ್ನನ್ನು ಧರ್ಮ ಬದಲಾಯಿಸುವಂತೆ ಒತ್ತಡ ಹೇರಿ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾರೆ.
ನಾನು ಮತ್ತು ಯುವಕ ಇತ್ತೀಚೆಗೆ ದಿ ಕೇರಳ ಸ್ಟೋರಿ ವೀಕ್ಷಿಸಲು ಹೋಗಿದ್ದೆವು ಎಂದು ಯುವತಿ ಹೇಳಿದ್ದಾರೆ. ಸಿನಿಮಾ ನೋಡಿ ಇಬ್ಬರ ನಡುವೆ ಜಗಳವಾಗಿದ್ದು, ಪ್ರಿಯಕರ ತನ್ನ ಮೇಲೆ ಹಲ್ಲೆ ನಡೆಸಿ ಬಿಟ್ಟು ಹೋಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಮೇ 19ರಂದು ಆಕೆ ದೂರು ದಾಖಲಿಸಿದ್ದಾಳೆ.
12ನೇ ತರಗತಿವರೆಗೆ ಓದಿರುವ ಯುವಕ ನಿರುದ್ಯೋಗಿಯಾಗಿದ್ದು, ಯುವತಿ ಉನ್ನತ ಶಿಕ್ಷಣ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಓದುತ್ತಿದ್ದಾಗ ಇಬ್ಬರೂ ಪರಿಚಯವಾದರು ಎನ್ನಲಾಗಿದೆ.

See also  "ಕಾವೇರಿ ವಿಚಾರದಲ್ಲಿ ಮೋದಿ ಜೊತೆಗೆ ನಾನು ಮಾತನಾಡಲ್ಲ" ಮಾಜಿ ಪ್ರಧಾನಿ ಹೀಗೆ ಹೇಳುವುದರ ಹಿಂದಿದೆ ಆ ಒಂದು ಕಾರಣ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget