Latestಚಿಕ್ಕಮಗಳೂರು

ಆದಿಚುಂಚನಗಿರಿ ಮಠ ನಿರ್ಮಿಸಿದ ಶ್ರೀ ಅಭಯಾಂಜನೇಯಸ್ವಾಮಿ, ಶ್ರೀ ಪ್ರಸನ್ನ ಮಹಾಗಣಪತಿ ಹಾಗೂ ಮಾತಾ ಲಲಿತಾಂಬಿಕಾ ದೇವಾಲಯ ಲೋಕಾರ್ಪಣೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರು ಭಾಗಿ

337

ನ್ಯೂಸ್ ನಾಟೌಟ್: ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಅಭಯಾಂಜನೇಯಸ್ವಾಮಿ, ಶ್ರೀ ಪ್ರಸನ್ನ ಮಹಾಗಣಪತಿ ಹಾಹೂ ಮಾತಾ ಲಲಿತಾಂಬಿಕಾ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮ ಮಂಗಳವಾರ (ಏ.15) ನಡೆಯಿತು. ಶ್ರೀ ಮಾತಾ ಲಲಿತ ಸಹಸ್ರನಾಮ ಪಾರಾಯಣ ಮತ್ತು ಸತ್ಸಂಗ ಪ್ರವಚನ ಮತ್ತು ಧಾರ್ಮಿಕ ಸಭೆಯ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠಗಳ ಪೂಜ್ಯ ಸ್ವಾಮೀಜಿಗಳವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು, ಮಾಜಿ ಸಿಎಂ ಡಿ. ವಿ. ಸದಾನಂದಗೌಡರು ಕೆ. ಗೋಪಾಲಯ್ಯರವರು ಮಾಜಿ ಸಚಿವರು, ಶಾಸಕರು, ಮಹಾಲಕ್ಷ್ಮಿ ಪುರಂ, ಬೆಂಗಳೂರು, ಬಿಬಿಎಂಪಿಯ ಮಾಜಿ ಉಪಮಹಾಪೌರರು ಹೇಮಲತಾ ಗೋಪಾಲಯ್ಯರವರು, ಮಾಜಿ ಉಪಮಹಾಪೌರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಶ್ರೀಮತಿ ಕುಸುಮಾ ಹನುಮಂತರಾಯಪ್ಪರವರು, ಗಣ್ಯರು ಹಾಗೂ ಶ್ರೀ ಮಠದ ಸದ್ಭಕ್ತರು ಉಪಸ್ಥಿತರಿದ್ದರು.

See also  RCB ಗೆದ್ದಿದ್ದಕ್ಕೆ 2 ಕ್ವಿಂಟಲ್ ಚಿಕನ್ ಮಾಡಿಸಿ ಇಡೀ ಊರಿಗೆ ಬಾಡೂಟ ಹಾಕಿಸಿದ ಯುವಕರು..! ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರಿಗೂ ಶ್ರದ್ಧಾಂಜಲಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget