ನ್ಯೂಸ್ ನಾಟೌಟ್: ಕಷ್ಟ ಪಟ್ಟು ಖರೀದಿಸಿದ ಚಿನ್ನದ ಸರವೊಂದು ಕಳೆದುಹೋದಾಗ ಅದರಿಂದಾಗುವ ನೋವು ಅಷ್ಟಿಷ್ಟಲ್ಲ. ಇಂಥದೊಂದು ಘಟನೆ ಕೇರಳದ ಕಾಞಂಗಾಡ್‌ನಲ್ಲಿ ನಡೆದಿದೆ.
ಇಲ್ಲಿನ ತೆರವಯತ್ ಅರಯಿಲ್ ಭಗವತಿ ಕ್ಷೇತ್ರದ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕುತ್ತಿಗೆಯಲ್ಲಿದ್ದ ಮೂರೂವರೆ ಪವನ್ ನ ಚಿನ್ನದ ಸರವೊಂದು ಕೆರೆ ಪಾಲಾಗಿದೆ. ಎಷ್ಟು ಹುಡುಕಿದರೂ ಸರ ಸಿಗಲಿಲ್ಲ. ತುಂಬಾ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅದರಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರು ಕೆರೆಯಲ್ಲಿ ಹುಡಕಾಡಿ ಕೆಸರಿನಲ್ಲಿ ಸಿಲುಕಿದ್ದ ಚಿನ್ನದ ಸರವನ್ನು ಪತ್ತೆ ಹಚ್ಚಿ ವಾರಸುದಾರನಿಗೆ ಹಸ್ತಾಂತರಿಸಿದರು.
ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಚಿನ್ನದ ಸರದ ವಾರಸುದಾರರು ಅಗ್ನಿಶಾಮಕ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.