ಕ್ರೈಂವೈರಲ್ ನ್ಯೂಸ್

ಮೇಕೆಗಳನ್ನು ಆಟೋದಲ್ಲಿ ತುಂಬಿಕೊಂಡು ಪೊಲೀಸ್ ಠಾಣೆಗೆ ತಂದದ್ದೇಕೆ ರೈತ? ಹೂವಿನ ಬೆಳೆಗೆ ಹಾನಿ ಮಾಡಿದ್ದಕ್ಕೆ ಇದೆಂಥಾ ಶಿಕ್ಷೆ..?

ನ್ಯೂಸ್ ನಾಟೌಟ್ : ಕೆಲವೊಮ್ಮೆ ಸಾಕು ಪ್ರಾಣಿಗಳು ಬೆಳೆ ಹಾನಿ ಮಾಡಿದಾಗ ರೈತ ಮತ್ತು ಪ್ರಾಣಿಗಳ ಮಾಲೀಕರ ನಡುವೆ ಜಗಳ ನಡೆಯುತ್ತವೆ. ಆದರೆ ಇಲ್ಲೊಂದು ವಿಭಿನ್ನ ಘಟನೆ ನಡೆದಿದ್ದು, ರೈತನೊಬ್ಬ ಆಟೋದಲ್ಲಿ ಹಲವು ಮೇಕೆಗಳನ್ನು ತುಂಬಿಕೊಂಡು ಠಾಣೆ ಮೆಟ್ಟಿಲೇರಿದ್ದಾರೆ.

ಈ ಘಟನೆ ಕಾನ್ಪುರದ ಸಾಧ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರೈತನೊಬ್ಬ ಆಟೋದಲ್ಲಿ ಹಲವು ಮೇಕೆಗಳನ್ನು ತುಂಬಿಕೊಂಡು ಠಾಣೆ ಮೆಟ್ಟಿಲೇರಿದ್ದು, ಕಾರಣ ಕೇಳಿದರೆ, ಚೆಂಡು ಹೂವಿನ ಬೆಳೆಯನ್ನು ಮೇಕೆಗಳು ತಿಂದು ಹಾಳು ಮಾಡಿದ್ದು, ಇದರಿಂದ ಮನನೊಂದ ರೈತ ಶೈಲೇಂದ್ರ ನಿಶಾದ್ ಎಂಬುವರು ಆಟೋದಲ್ಲಿ ಹಲವು ಮೇಕೆಗಳನ್ನು ತುಂಬಿಕೊಂಡು ಬಂದು ನ್ಯಾಯ ದೊರಕಿಸಿಕೊಡುವಂತೆ ಪೊಲೀಸ್ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಜೊತೆಗೆ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಮೇಕೆಗಳು ಗದ್ದೆಯಲ್ಲಿ ಬೆಳೆದಿದ್ದ ಚೆಂಡು ಹೂವಿನ ಬೆಳೆ ಹಾನಿ ಮಾಡಿದ್ದು, ಬಹುತೇಕ ಗಿಡಗಳನ್ನು ತಿಂದು ಹಾಕಿವೆ ಎಂದು ಆರೋಪಿಸಿದರು. ಈ ಹಿನ್ನೆಲೆ ಪೊಲೀಸರು ಮೇಕೆಗಳ ಮಾಲೀಕನನ್ನು ಠಾಣೆಗೆ ಕರೆ ತಂದು ರೈತನ ಮುಂದೆ ಛೀಮಾರಿ ಹಾಕಿದಾಗ ರೈತನಿಗೂ ಸಮಾಧಾನವಾಯಿತು. ಬಳಿಕ ಮಾಲೀಕ ಮೇಕೆಗಳೊಂದಿಗೆ ಠಾಣೆಯಿಂದ ವಾಪಸಾದರು ಎಂದರು.

ಇದರಿಂದಾಗಿ ಪೊಲೀಸರು ಒಮ್ಮೆ ಅಚ್ಚರಿಗೊಂಡಿದ್ದು, ಬಳಿಕ ಮೇಕೆಗಳ ಮಾಲೀಕರನ್ನು ಹಿಡಿದು ಬುದ್ಧಿ ಹೇಳಿದ್ದಾರೆ.
ರೈತ ಶೈಲೇಂದ್ರ ನಿಶಾದ್ ಹೇಳಿದ ಪ್ರಕಾರ “ಗೌರಿಕ್ಕರ ಗ್ರಾಮದ ಹೊಲದಲ್ಲಿ ಚೆಂಡು ಹೂವಿನ ಬೆಳೆ ಬೆಳೆದಿದ್ದೇನೆ. ಕಳೆದ 10 ದಿನಗಳಿಂದ ನಿರಂತರವಾಗಿ ಮೇಕೆಗಳು ಬಂದು ಬೆಳೆ ಹಾನಿ ಮಾಡುತ್ತಿದ್ದು, ಮಂಗಳವಾರ ಸಂಜೆ ಮೇಕೆಗಳನ್ನು ಕಂಡಾಗ ಸಿಟ್ಟಿಗೆದ್ದು ಆಟೋದಲ್ಲಿ ತುಂಬಿಸಿಕೊಂಡು ಪೊಲೀಸ್ ಠಾಣೆ ತೆಗೆದುಕೊಂಡು ಹೋದೆ. ಮೇಕೆ ಮಾಲೀಕನ ವಿರುದ್ಧ ದೂರು ನೀಡಲು ತೆರಳಿದ್ದೆ. ಬಳಿಕ, ಪೊಲೀಸರು ಆ ಮಾಲೀಕನಿಗೆ ಛೀಮಾರಿ ಹಾಕಿ ಬಿಡುಗಡೆಗೊಳಿಸಿದರು” ಎಂದು ಹೇಳಿದರು.

ಹಳೆಯ ಪ್ರಕರಣ.. ಇಲಿ ವಿಚಾರಕ್ಕೆ ಅಪಾರ್ಟ್ಮೆಂಟ್ ನಿವಾಸಿಗಳು ಜಟಾಪಟಿಗಿಳಿದು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಘಟನೆ ಜೂನ್​ 23 ರಂದು ನಡೆದಿತ್ತು. ಕಾರಿನ ವಯರ್​ಗಳನ್ನು ಇಲಿಗಳು ಕಚ್ಚಿವೆ ಎಂದು ಕಾರು ಮಾಲೀಕ ಲಕ್ಷ – ಲಕ್ಷ ಪರಿಹಾರಕ್ಕೆ ಬೇಡಿಕೆ ಇಟ್ಟು ರಂಪಾಟ ನಡೆಸಿದ್ದ. ಪರಿಹಾರ ಕೊಡದಿದ್ದಕ್ಕೆ ಅಪಾರ್ಟ್ಮೆಂಟ್ ಅಸೋಸಿಯೇಷನ್‌ ಅಧ್ಯಕ್ಷರಿಗೆ ಬೆದರಿಕೆ ಹಾಕಿದ ಹಿನ್ನೆಲೆ ಬೇಸತ್ತು ಅಪಾರ್ಟ್ಮೆಂಟ್‌ ನಿವಾಸಿಗಳು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದರು. ಬೆಂಗಳೂರಿನ ಗಂಗಾನಗರದ ಕಂಫರ್ಟ್‌ ಎನ್​ಕ್ಲೇವ್‌ ಅಪಾರ್ಟ್ಮೆಂಟ್‌ನಲ್ಲಿ ಈ ಘಟನೆ ನಡೆದಿತ್ತು.

Related posts

ಮಂಡ್ಯ: ಒಂದೇ ಕುಟುಂಬ ಐವರ ಕೊಚ್ಚಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬಿಜೆಪಿ ಕಚೇರಿಯಲ್ಲಿ ಅಗ್ನಿ ಅವಘಡ..! ಬೆಂಕಿ ನಂದಿಸಲು ಹರಸಾಹಸ

Temple: ದೇಗುಲದ ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿದ ಅರ್ಚಕ..! ಟಿವಿ ನಿರೂಪಕಿ ಮೇಲೆ ಅತ್ಯಾಚಾರ, ಆರೋಪಿಯ ಬಂಧನ