ಕರಾವಳಿಕೊಡಗು

ಕೊನೆ ಪುತ್ರಿಯ ಮದುವೆ ದಿನದಂದೇ ತಂದೆಗೆ ಹೃದಯಾಘಾತ,ಸೂತಕದ ಮಧ್ಯೆಯೂ ನೆರವೇರಿದ ವಿವಾಹ

324

ನ್ಯೂಸ್ ನಾಟೌಟ್ : ತನ್ನ ಮಗಳ ಮದುವೆ ದಿನದಂದೇ ತಂದೆ ಹೃದಯಾಘಾತಕ್ಕೆ ತುತ್ತಾದ ದಾರುಣ ಘಟನೆ ಮಂಗಳೂರು ಸಮೀಪದ ಉಳ್ಳಾಲದಿಂದ ವರದಿಯಾಗಿದೆ. ಕೊನೆಯ ಪುತ್ರಿಯ ವಿವಾಹ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಈ ದುರಂತ ಸಂಭವಿಸಿದೆ. ಬೋಳಿಯಾರ್‌ ಕುಕ್ಕೋಟ್ಟು ಕುಚುಗುಡ್ಡೆಯ ಹಸನಬ್ಬ (60) ಮೃತರು ಎಂದು ತಿಳಿದು ಬಂದಿದೆ.

ಅವರ ಪುತ್ರಿಯ ವಿವಾಹವು ಕಾಸರಗೋಡಿನ ಯುವಕನೊಂದಿಗೆ ಸೋಮವಾರ ಹೊಸಂಗಡಿಯ ಸಭಾಂಗಣವೊಂದರಲ್ಲಿ ನಿಗದಿಯಾಗಿತ್ತು. ಮದುವೆ ಸಿದ್ದತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹಸನಬ್ಬ  ಅವರಿಗೆ ಇದ್ದಕ್ಕಿಂತ ಹಾಗೆ ಮುಂಜಾನೆ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು.ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗದೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವಧುವಿನ ತಂದೆ ನಿಧನರಾದ ಕಾರಣ‌ ಹೊಸಂಗಡಿಯಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭವನ್ನು ರದ್ದುಗೊಳಿಸಿ ಬಳಿಕ ಎರಡು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಸಂಜೆಯ ವೇಳೆಗೆ ವರನ ಮನೆಯಲ್ಲಿ ನಿಖಾ‌ಹ್ ನೆರವೇರಿದೆ ಎಂದು ತಿಳಿದು ಬಂದಿದೆ.ಹಸನಬ್ಬರವರು  ಕುಕ್ಕೋಟ್ಟು ಜುಮ್ಮಾ ಮಸೀದಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

See also  ಕಲ್ಲುಗುಂಡಿ: ಬೈಕ್ ಮತ್ತು ಕಾರು ಮಧ್ಯೆ ಅಪಘಾತ, ಬೈಕ್‌ ಸವಾರನಿಗೆ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget