ಕರಾವಳಿ

ಗ್ರೀನ್ ಗೌನ್‌ ಧರಿಸಿ ಪೋಸ್ ಕೊಟ್ಟ ಖ್ಯಾತ ನ್ಯೂಸ್‌ ನಿರೂಪಕಿ..!,ಕರಾವಳಿಯ ರೂಪೇಶ್ ಶೆಟ್ಟಿ ಹೊಸಸಿನಿಮಾ ‘ಅಧಿಪತ್ರ’ ಚಿತ್ರದ ನಾಯಕಿಯೂ ಇವರೇ..ಹೇಗಿದ್ದಾರೆ ನೋಡಿ..

154

ನ್ಯೂಸ್‌ ನಾಟೌಟ್‌ : ನ್ಯೂಸ್‌ ನಿರೂಪಕಿ,ನಟಿ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಆಗಾಗ ತಮ್ಮ ಸ್ಟೈಲಿಶ್ ಪೋಟೋಗಳನ್ನು ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಂ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.

ಹಾಗೆಯೇ ಸದ್ಯ ಗ್ರೀನ್ ಗೌನ್‌ ಧರಿಸಿ ಪೋಸ್ ಕೊಟ್ಟಿದ್ದಾರೆ.ಇದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ.

ಈ ಫೋಟೋದಲ್ಲಿ ಅವರು ಪಾಚಿ ಕಲರ್‌ನ ಸ್ಕರ್ಟ್ ಹಾಗೂ ಬ್ಲೌಸ್‌ನಲ್ಲಿ ಸಿಲ್ವರ್‌ ಡಿಸೈನ್‌ ಇರೋ ಡ್ರೆಸ್‌ ತೊಟ್ಟು ಜಾನ್ವಿ ಮಿಂಚಿದ್ದಾರೆ.ಹಲವರು ಜಾನ್ವಿ ಮೇಕಪ್‌ನ್ನು ಟೀಕಿಸಿದ್ದಾರೆ. ಕೆಲವೊಬ್ಬರು ನಿಪ್ಪಾನ್ ಪೈಂಟ್ ಎಂದಿದ್ದಾರೆ. ಎರಡು ಕೆಜಿ ಮೇಕಪ್ ಇದೆ ಎಂದಿದ್ದಾರೆ ಇನ್ನೂ ಕೆಲವರು. ಮೇಕಪ್ ಓವರ್ ಆಯ್ತು ಎಂದೆಲ್ಲಾ ಟೀಕಿಸಿದ್ದಾರೆ. 

ಕಲರ್ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಂತರ ಜಾನ್ವಿ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸಿದರು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡು ಸುಮ್ಮನಿದ್ದ ಜಾನ್ವಿ ಕೊನೆಯಲ್ಲಿ ಎರಡನೇ ಸ್ಥಾನ ಪಡೆದು ಟ್ರೋಫಿ ಗೆದ್ದಿದ್ದರು.

ಸದ್ಯ ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಸಿನಿಮಾ ‘ಅಧಿಪತ್ರ’ ಚಿತ್ರದಲ್ಲಿ ಜಾಹ್ನವಿ ನಾಯಕಿ ಪಾತ್ರ ಮಾಡಲಿದ್ದಾರೆ. ಕೆ.ಆರ್ ಸಿನಿ ಕಂಬೈನ್ಸ್‌ ಬ್ಯಾನರ್ ಅಡಿಯಲ್ಲಿ ತಯಾರಾಗ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.

ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಈ ಚಿತ್ರವನ್ನು ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಟ್ರೆಡಿಶನಲ್ ಲುಕ್‌ನಲ್ಲೂ ಜಾನ್ವಿ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾ ಪೋಸ್ಟ್ ಮಾಡ್ತಿರುತ್ತಾರೆ.

See also  ಸುಳ್ಯದ ಹುಡುಗರ "ಮೌನ ಮಾತಾದಾಗ"  ಬಿಡುಗಡೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget