ಕರಾವಳಿಸುಳ್ಯ

ನರ್ಸರಿಯಿಂದ ಕದ್ದು ಗಿಡಗಳನ್ನು ಕೊಂಡೊಯ್ಯುತ್ತಿದ್ದಾಗ ಕಾರ್ ಪಲ್ಟಿ,ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ನ್ಯೂಸ್ ನಾಟೌಟ್ : ನರ್ಸರಿಯಿಂದ ಗಿಡಗಳನ್ನು ಕಳವುಗೈದು ಕೊಂಡೊಯ್ಯುತ್ತಿದ್ದ ಓಮ್ನಿ ಕಾರು ಪಲ್ಟಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ.ಅರಂಬೂರಿನ ಎಸ್ಎಂ ನರ್ಸರಿಯಿಂದ ಗಿಡಗಳನ್ನು ಕಳವುಗೈದು ಓಮ್ನಿ ಕಾರೊಂದು ವೇಗವಾಗಿ ಚಲಾಯಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ರಾತ್ರಿ ಸುಮಾರು ಒಂದು ಘಂಟೆಗೆ ಘಟನೆ ನಡೆದಿದೆಯೆಂದು ಅಂದಾಜಿಸಲಾಗಿದೆ.ಕಾರು ಸುಳ್ಯದ ಕಡೆ ಪ್ರಯಾಣಿಸಿದ್ದು,ಈ ವೇಳೆ ಅವರನ್ನು ಹಿಂಬಾಲಿಸಿದಾಗ ವಿಷ್ಣು ಸರ್ಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಕಾರಿನೊಳಗಡೆ ಹೂವಿನ ಗಿಡಗಳು ಪತ್ತೆಯಾಗಿದ್ದು ಈ ಬಗ್ಗೆ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯರೊಬ್ಬರು ಈ ಬಗ್ಗೆ ವಿವರಿಸಿದ್ದಾರೆ.ಆರೋಪಿಗಳ ವಿರುದ್ದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ: ಗಂಭೀರ ಗಾಯಗೊಂಡ ಗಾಯಾಳು ಮಂಗಳೂರು ಆಸ್ಪತ್ರೆಗೆ ಶಿಫ್ಟ್‌

ಹಿಜಾಬ್ ತೀರ್ಪು: ಹೈಕೋರ್ಟ್ ಆದೇಶದ ವಿರುದ್ಧ ಸುಳ್ಯ ತಾಲೂಕಿನ ವ್ಯಕ್ತಿ ಕಿಡಿ..!

ಸುಬ್ರಹ್ಮಣ್ಯ: ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಸುಖಾಂತ್ಯ..! ಮಂಗಳೂರಿನಲ್ಲಿ ಯುವತಿ ಪತ್ತೆಯಾಗಿದ್ದು ಹೇಗೆ..?