ಕರಾವಳಿಕೊಡಗುಕ್ರೈಂಸುಳ್ಯ

ಚಿನ್ನದಂಗಡಿ ಕನಸು ಹೊತ್ತುಕೊಂಡಿದ್ದ ಯುವಕನ ಮೃತ ದೇಹ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ,ಇಂದು ಶುಭಾರಂಭಕ್ಕೆ ಸಜ್ಜಾಗಿತ್ತು ‘ಐಶ್ವರ್ಯ ಗೋಲ್ಡ್’ ಚಿನ್ನದಂಗಡಿ

ನ್ಯೂಸ್ ನಾಟೌಟ್ : ಚಿನ್ನದಂಗಡಿ ಮಾಡಬೇಕೆಂದು ಹಲವು ಕನಸುಗಳನ್ನು ಹೊತ್ತುಕೊಂಡಿದ್ದ ಯುವಕನೋರ್ವ ಚಿನ್ನದಂಗಡಿ ಉದ್ಘಾಟನೆ ವೇಳೆಗಾಗಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಕಡಬದ ಮರ್ದಾಳದಿಂದ ವರದಿಯಾಗಿದೆ. ಯುವಕನ ಮೃತದೇಹ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.


ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ. ಮರ್ದಾಳ ಮಸೀದಿ ಬಿಲ್ಡಿಂಗ್ ನಲ್ಲಿ ಜೂನ್ 22(ಇಂದು)ರಂದು ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದಂಗಡಿ ಶುಭಾರಂಭಗೊಳ್ಳಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಶುಭಾರಂಭಕ್ಕೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಲಾಗಿತ್ತು. ಆದರೆ ಅಂಗಡಿ ಶುಭಾರಂಭದ ದಿನವಾದ ಇಂದು ಬೆಳಿಗ್ಗೆ ನಾಗಪ್ರಸಾದ್‌ ಮೃತದೇಹವು ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯ ನಂತರವಷ್ಟೇ ಸಂಬಂಧಿಸಿದ ಕಾರಣ ತಿಳಿದುಬರಬೇಕಿದೆ.

Related posts

KSRTC ಬಸ್‌ಗಳ ನಡುವೆ ಭೀಕರ ಅಪಘಾತ, ಇಬ್ಬರು ಚಾಲಕರಿಗೆ ಗಂಭೀರ ಗಾಯ

ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆ..? ಅಕ್ಟೋಬರ್​ 15ರ ವರೆಗೂ ತಮಿಳುನಾಡಿಗೆ ನೀರು ಬಿಡಲು ಮತ್ತೆ ಆದೇಶ!

ಬಸ್​ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥ..! ಚಲಿಸುತ್ತಿದ್ದ ಬಸ್ ಹತ್ತಿ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಟ್ರಾಫಿಕ್​ ಪೊಲೀಸ್..!