ಕರಾವಳಿಸುಳ್ಯ

ಬಸ್ಸನ್ನು ಓವರ್ ಟೇಕ್ ಮಾಡುವಾಗ ಸ್ಕಿಡ್‌ ಆದ ಬೈಕ್‌ ; ಓರ್ವ ಮೃತ್ಯು, ಮತ್ತೋರ್ವನಿಗೆ ಗಾಯ

ನ್ಯೂಸ್ ನಾಟೌಟ್:ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಲಬಾರ್‌ ಬಸ್ಸನ್ನು ಓವರ್‌ಟೆಕ್ ಮಾಡಿದಾಗ ಬೈಕೊಂದು ಸ್ಕಿಡ್‌ ಆಗಿ ಬಿದ್ದ ಘಟನೆ ನಡೆದಿದೆ. ಇದರ ಪರಿಣಾಮ ಓರ್ವ ಮೃತಪಟ್ಟಿದ್ದು ಮತ್ತೋರ್ವ ಗಾಯಗೊಂಡ ಘಟನೆ ಇಂದು ರಾತ್ರಿ ಸುಬ್ರಹ್ಮಣ್ಯದ ಇಂಜಾಡಿ ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಸುಬ್ರಹ್ಮಣ್ಯದ ಕಲ್ಲಗುಡ್ಡೆ ನಿವಾಸಿ ಪೈಂಟರ್‌ ರಮೇಶ್‌ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದ ಇಂಜಾಡಿ ಸಮೀಪ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಪ್ರಶಾಂತ್‌ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಗಾಯಾಳುವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಪುತ್ತೂರು: ಬ್ಯಾನರ್ ಗೆ ಚಪ್ಪಲಿ ಹಾರ ಪ್ರಕರಣ: ಹಿಂದೂ ಕಾರ್ಯಕರ್ತರಿಗೆ ಪುತ್ತಿಲ ಪರಿವಾರದಿಂದ ಧನ ಸಹಾಯ

ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಆಗಮಿಸಿದ ಶಿವಣ್ಣ ಜಗತ್ಪ್ರಸಿದ್ಧ ಯಾಣಕ್ಕೆ ಭೇಟಿ,29 ವರ್ಷಗಳ ನಂತರ ‘ನಮ್ಮೂರ ಮಂದಾರ ಹೂವೆ’ ಚಿತ್ರೀಕರಣ ಸ್ಥಳದಲ್ಲಿ ಹ್ಯಾಟ್ರಿಕ್ ಹೀರೋ!

ಮಂಗಳೂರು: ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ ಕೆಳಕ್ಕೆ ಬಿದ್ದ 70 ವರ್ಷದ ಅಜ್ಜ..! ಪೊಲೀಸ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಸಂಭವನೀಯ ದುರಂತದಿಂದ ಪಾರು, ವಿಡಿಯೋ ವೀಕ್ಷಿಸಿ