Latestವೈರಲ್ ನ್ಯೂಸ್

ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಏಕೆ ಮಲಗಿಸುತ್ತಾರೆ? ಇದು ನಂಬಿಕೆಯೋ? ವೈಜ್ಞಾನಿಕ ಕಾರಣವಿದೆಯೋ?ಇಲ್ಲಿದೆ ಉತ್ತರ..

2k

ನ್ಯೂಸ್‌ ನಾಟೌಟ್: ಸಾಮಾನ್ಯವಾಗಿ ಶಿಶುಗಳಿಗೆ ಸ್ನಾನ ಮಾಡಿಸಿದ ನಂತರ ಕಾಟನ್ ಬಟ್ಟೆಯಿಂದ ಮೈಯನ್ನು ಚೆನ್ನಾಗಿ ಒರೆಸಿ ಬಳಿಕ ಮೆತ್ತನೆಯ, ಹಗುರವಾದ ಬಟ್ಟೆಯಿಂದ ಪೂರ್ತಿಯಾಗಿ ಸುತ್ತಿ ಕೈ- ಕಾಲು ಆಡದಂತೆ ಕಟ್ಟುತ್ತಾರೆ. ಅದು ಯಾಕೆ? ಅನ್ನೋದಕ್ಕೆ ಇಲ್ಲಿದೆ ಉತ್ತರ..

ಈ ಅಭ್ಯಾಸ ಮಗುವಿಗೆ ಹಿಂಸೆ ಕೊಟ್ಟಂತೆ ಭಾಸವಾಗಬಹುದು. ಇನ್ನೂ ಕೆಲವರು ಈ ದೃಶ್ಯ ಕಂಡು ಅಯ್ಯೋ ಮಕ್ಕಳಿಗೆ ಯಾಕಿಷ್ಟು ಹಿಂಸೆ ಕೊಡಬೇಕು ಎನ್ನುತ್ತಾರೆ. ಆದರೆ ಇದರಿಂದ ಮಕ್ಕಳಿಗೆ ಕಷ್ಟವಾಗುತ್ತದೆ ಎಂಬುದು ಶುದ್ಧ ಸುಳ್ಳು. ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು gallaryrk ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಅವರು ತಿಳಿಸಿರುವ ಕೆಲವು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಹಿರಿಯರು ಹಿಂದಿನಿಂದಲೂ ಹುಟ್ಟಿದ ಕಂದಮ್ಮಗಳಿಗೆ ಸ್ನಾನ ಆದ ಬಳಿಕ ಬಟ್ಟೆ ಸುತ್ತಿ ಮಲಗಿಸುವ ಒಂದು ಅಭ್ಯಾಸವನ್ನು ರೂಢಿಸಿಕೊಂಡು ಬಂದಿದ್ದರು. ಅವರ ಪ್ರಕಾರ, ಈ ರೀತಿ ಮಾಡುವುದರಿಂದ ಮಗು ಬೆಚ್ಚಗಿರುತ್ತದೆ ಒಂದು ಕಾರಣವಾದರೆ , ನೆತ್ತಿಗೆ ಹೊರಗಿನ ಗಾಳಿ ಹೋಗದಿರಲಿ ಅನ್ನೋದು ಮತ್ತೊಂದು ಕಾರಣ , ಜೊತೆಗೆ ಮಗುವಿನ ಕೈ- ಕಾಲು ಸೊಟ್ಟ ಆಗದೆ ಸರಿಯಾಗಿ ಬೆಳವಣಿಗೆ ಆಗಲಿ ಅನ್ನೋದು ಕೂಡ ಆಗಿದೆ ಹಾಗಾಗಿಯೇ ಮಗುವನ್ನು ಪ್ರತಿನಿತ್ಯ ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ.

ಈ ರೀತಿ ಮಾಡುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಮಗು ಹೊಟ್ಟೆಯಲ್ಲಿದ್ದಾಗ ಬೆಚ್ಚಗೆ ಒಂದು ಗೂಡಿನಲ್ಲಿದ್ದ ಹಾಗೆಯೆ ಇರುತ್ತದೆ. ಅದು ಒಂದೇ ಸಲ ಹೊರಗಡೆ ಬಂದ ಮೇಲೆ ಅದಕ್ಕೆ ಎಲ್ಲವೂ ಹೊಸದಾಗಿರುತ್ತದೆ. ಚಿಕ್ಕ ಚಿಕ್ಕ ಶಬ್ದಗಳಿಗೂ ಬೆಚ್ಚಿಬಿಳಲು ಪ್ರಾರಂಭಿಸುತ್ತದೆ. ಜೊತೆಗೆ ಮಲಗಿರುವಾಗ ಅದರ ಕೈ ಕಾಲು ಆ ಕಡೆ- ಈ ಕಡೆ ಆದರೂ ಅದಕ್ಕೆ ಎಚ್ಚರವಾಗಬಹುದು ಹಾಗಾಗಿಯೇ ವೈದ್ಯರು ಮಕ್ಕಳನ್ನು ಬಟ್ಟೆಯಲ್ಲಿ ಸುತ್ತಿ ಮಲಗಿಸಿ ಎಂದು ಸಲಹೆ ನೀಡುತ್ತಾರೆ. ಅದಲ್ಲದೆ ಈ ರೀತಿ ಮಾಡುವುದರಿಂದ ಮಕ್ಕಳ ಕೈ ಕಾಲು ನೇರವಾಗಿರುತ್ತದೆ ಇದರಿಂದ ನಡೆಯುವ ವಯಸ್ಸಿನಲ್ಲಿಯೂ ಯಾವುದೇ ರೀತಿ ತೊಂದರೆಯಾಗುವುದಿಲ್ಲ ಎಮದು ಹೇಳಲಾಗಿದೆ.

See also  ಮಾತೇ ಬರದಂತಾಗಿದೆ, ಹೃದಯ ಒಡೆದಿದೆ ಎಂದ ವಿರಾಟ್ ಕೊಹ್ಲಿ..! ಆರ್‌ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದ ಬಗ್ಗೆ ವಿರಾಟ್ ಕೊಹ್ಲಿ ಮೊದಲ ಪ್ರತಿಕ್ರಿಯೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget