ಕರಾವಳಿಸುಳ್ಯ

ಹಠಾತ್ ಕೊನೆಯುಸಿರೆಳೆದ ಯುವ ಆಟೋ ಚಾಲಕ ,ಸಂಪಾಜೆಯ ವ್ಯಕ್ತಿಗೆ ಆಗಿದ್ದೇನು?

219

ನ್ಯೂಸ್ ನಾಟೌಟ್‌ : ಸಂಪಾಜೆ -ಕಲ್ಲುಗುಂಡಿಯಲ್ಲಿ ಅಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಚಿತ್ತರಂಜನ್‌ ಅವರು ಆರೋಗ್ಯದಲ್ಲಾದ ಏರು ಪೇರಿನಿಂದಾಗಿ ಕೊನೆಯುಸಿರೆಳೆದಿದ್ದಾರೆಂದು ತಿಳಿದು ಬಂದಿದೆ.ಅತಿ ಸಣ್ಣ ಪ್ರಾಯದಲ್ಲಿಯೇ (35 ವರ್ಷ ಪ್ರಾಯ) ನಿಧನರಾಗಿರುವ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಂಪಾಜೆ ಗ್ರಾಮದ ಕೈಪಡ್ಕ ನಿವಾಸಿಯಾದ ಇವರು ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.ಹೀಗಾಗಿ ಚಿಕಿತ್ಸೆಗಾಗಿ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಚಿತ್ತರಂಜನ್ ಅವರು ತಂದೆ ಚಂದ್ರಶೇಖರ,ತಾಯಿ ನಳಿನಿ, ಪತ್ನಿ ನಿಶಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

See also  ಹುಡುಗಿ ವಿಚಾರಕ್ಕೆ 20ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ..! ಬಸ್ ನಿಲ್ದಾಣದಿಂದ ಓಡಿದ ಪ್ರಯಾಣಿಕರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget