Uncategorized

ಮಾಜಿ ಶಾಸಕನ ಮೊಮ್ಮಗನಿಗೂ ಐಸಿಸ್ ಉಗ್ರರ ನಂಟು, ಜಮ್ಮು ಕಾಶ್ಮೀರಕ್ಕೂ ಮಂಗಳೂರಿಗೂ ನೇರ ಲಿಂಕ್‌..! ದೇಶಾದ್ಯಂತ ಐಸಿಸ್ ವಿಸ್ತರಣೆಗೆ ನಡೆದಿದ್ದ ಸಂಚು..!

ಮಂಗಳೂರು: ಮಾಜಿ ಶಾಸಕನ ಕುಟುಂಬಕ್ಕೆ ಐಸಿಸ್ ನೆಟ್ವರ್ಕ್ ಇರುವುದು ಬಹಿರಂಗಗೊಂಡಿದೆ. ಬುಧವಾರ ದೇಶಾದ್ಯಂತ ಎನ್‌ಐಎ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಈ ಪೈಕಿ ಮಂಗಳೂರಿನ ಉಳ್ಳಾಲದ ಮಾಜಿ ಶಾಸಕ ಬಿಎಂ ಇದಿನಬ್ಬ ಅವರ ಪುತ್ರನ ಮನೆಯೂ ಒಂದಾಗಿತ್ತು. ಪುತ್ರನ ಬಂಧನದ ನಡುವೆ ಇದೀಗ ಮೊಮ್ಮಗನನ್ನೂ ತನಿಖಾಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿರುವ ಸುದ್ದಿ ಹೊರ ಬಿದ್ದಿದೆ.

ಏನಿದು ಘಟನೆ?

ಮಾಜಿ ಶಾಸಕ ಇದಿನಬ್ಬರ ಹಿರಿಯ ಪುತ್ರ ಬಿಎಂ ಬಾಷಾರಿಗೆ ಸೇರಿದ ಮಂಗಳೂರಿನ ಮಾಸ್ತಿಕಟ್ಟೆಯ ಮನೆಗೆ ದಾಳಿ ನಡೆಸಲಾಗಿತ್ತು. ಬುಧವಾರ ಸಂಜೆಯ ವೇಳೆಗೆ ಬಾಷಾ ಅವರ ಕಿರಿಯ ಪುತ್ರ ಅಮರ್‌ ಅಬ್ದುಲ್‌ ರಹ್ಮಾನ್‌ ಎಂಬಾತನನ್ನೂ ಬಂಧಿಸಲಾಗಿದೆ. ಒಟ್ಟಾರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನುಎನ್ಐಎ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಉಗ್ರರೊಂದಿಗೆ ಸಂಪರ್ಕ ಹೊಂದಿರುವ ನೇರ ಆರೋಪದಡಿ ಎಲ್ಲರ ಬಂಧನವಾಗಿದೆ. ಬಂಧಿತರು ಪರಸ್ಪರ ಒಬ್ಬರಿಗೊಬ್ಬರು ಸಂಪರ್ಕದಲ್ಲಿದ್ದರು, ದೇಶ ವಿರೋಧಿ ಚಟುವಟಿಕೆಯಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಇದೇ ವೇಳೆ ಐಸಿಸ್ ಉಗ್ರರು ದೇಶಾದ್ಯಂತ ತಮ್ಮ ನೆಟ್‌ ವರ್ಕ್ ಹೆಚ್ಚಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿರುವ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.

ಅಗ್ರ ಅಮೀನ್ ಜತೆಗೆ ಸಂಪರ್ಕ

ಕಳೆದ ಮಾರ್ಚ್ ತಿಂಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ಉಗ್ರ ಮೊಹಮ್ಮದ್ ಅಮೀನ್ ಜೊತೆಗೆ ಬಂಧಿತರೆಲ್ಲರೂ ನಿರಂತರ ಸಂಪರ್ಕದಲ್ಲಿದ್ದರು. ಅಮೀನ್ ಭಾರತದಾದ್ಯಂತ ಯುವಕರನ್ನು ಒಂದೆಡೆ ಸೇರಿಸಿ ಐಸಿಸ್ ಸೇರುವ ಬಗ್ಗೆ ಪ್ರೇರಣೆ ನೀಡುತ್ತಿದ್ದ. ಕೇರಳ, ಕರ್ನಾಟಕ ಮತ್ತು ಇತರೆ ಕಡೆಗಳಲ್ಲಿ ತೀವ್ರವಾದಿ ಮನಸ್ಸಿನ ಯುವಕರನ್ನು ಸಂಘಟನೆಗೆ ಸೇರಿಸುತ್ತಿದ್ದರು. ಇದಕ್ಕಾಗಿ ಮಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಶಾಸಕನ ಪುತ್ರ ಹಾಗೂ ಮೊಮ್ಮಗ ಸೇರಿದಂತೆ ಬಂಧಿತರೆಲ್ಲರೂ ಹಣ ಸಂಗ್ರಹಿಸಿ ಕಾಶ್ಮೀರದ ಉಗ್ರ ವಕಾರ್ ಲೋನ್‌ ಗೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

Related posts

ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ; ಪ್ರಾಣಾಪಾಯದಿಂದ ಪಾರಾದ ಮನೆಯವರು

ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡುವುದಿಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಅವಿವಾಹಿತೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು