ಕರಾವಳಿಪುತ್ತೂರು

ಜೆಸಿಬಿ ಮೇಲೆ ಮಣ್ಣು ಕುಸಿದು ಭೀಕರ ದುರಂತ,ಮಣ್ಣಲ್ಲಿ ಸಿಲುಕಿ ಚಾಲಕ ಮೃತ್ಯು

ನ್ಯೂಸ್ ನಾಟೌಟ್ : ಜೆಸಿಬಿಯಿಂದ ಮಣ್ಣು ಅಗೆತದ ವೇಳೆ ಮಣ್ಣು ಕುಸಿದು ಜೆಸಿಬಿಯ ಮೇಲೆ ಬಿದ್ದು ಜೆಸಿಬಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಸಂಭವಿಸಿದೆ.ಮಂಗಳೂರಿನ ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಳಲಿ ನಾಡಾಜೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಜೆಸಿಬಿಯ ಚಾಲಕ ಝಾರ್ಖಂಡ್‌ ಕೊಸಾರ್‌ ಅನ್ಸಾರಿ (22) ಮೃತರು.

ಮಣ್ಣು ಅಗೆತದ ವೇಳೆ ನಿಂತಿದ್ದ ಟಿಪ್ಪರ್‌ ಹಿಂಬದಿಗೆ ಹಾಗೂ ಜೆಸಿಬಿಯ ಮೇಲೆ ಮಣ್ಣು ಕುಸಿದು ಬಿತ್ತು. ಜೆಸಿಬಿಯ ಚಾಲಕ ಮಣ್ಣಲ್ಲಿ ಸಿಲುಕಿಕೊಂಡ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ, ಬಜಪೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರು ಹಾಗೂ ಎರಡು ಜೆಸಿಬಿ ಸಹಾಯದಿಂದ ಮಣ್ಣು ತೆಗೆಯಲು ಹರಸಾಹಸ ಮಾಡಲಾಯಿತು.ಆದರೆ ಅದಾಗಲೇ ಚಾಲಕ ಮೃತಪಟ್ಟಿದ್ದು,ಬದುಕಿಸಲಾಗಲಿಲ್ಲ.

Related posts

Kantara-1: ರಿಷಬ್​ ಪತ್ನಿ ನಟಿಸಲಿದ್ದಾರಾ..? ಈ ಬಗ್ಗೆ ಪ್ರಗತಿ ಶೆಟ್ಟಿ ಹೇಳಿದ್ದೇನು?

ಮಂಗಳೂರಿನಲ್ಲೂ ಮೈತ್ರಿಗೆ ಶಾಕ್..! ಜೆಡಿಎಸ್ ನ 42 ಪದಾಧಿಕಾರಿಗಳು ಕಾಂಗ್ರೆಸ್ ಸೇರ್ಪಡೆ..!

ಸಂಪಾಜೆ: ಕಾರ್ಮಿಕ ಮುಖಂಡ ಕೆ.ಪಿ.ಜಾನಿಯವರ ಪತ್ನಿ ನಿಧನ..! ಕೆಲವು ವರ್ಷಗಳಿಂದ ಕಾಡುತ್ತಿದ್ದ ಅನಾರೋಗ್ಯ