Latestಬೆಂಗಳೂರು

ಏರ್‌ಪೋರ್ಟ್ ನಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೋ ಟ್ರಾವೆಲರ್ ಡಿಕ್ಕಿ ..!

706

ನ್ಯೂಸ್‌ ನಾಟೌಟ್‌: ವಿಮಾನ ನಿಲ್ದಾಣದಲ್ಲಿ  ನಿಂತಿದ್ದ ಇಂಡಿಗೋ ವಿಮಾನಕ್ಕೆ  ಟೆಂಪೋ ಟ್ರಾವೆಲರ್ ಬಂದು ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ (Kempegowda International Airport) ವಿಮಾನ ನಿಲ್ದಾಣದಲ್ಲಿ  ಸಂಭವಿಸಿದೆ.

ಟೆಂಪೋ ಟ್ರಾವೆಲರ್​​​ನ ಚಾಲಕ ನಿದ್ರೆಯ ಮಂಪರಿನಲ್ಲಿದ್ದು, ಚಾಲಕನ ಅರಿವಿಗೆ ಬಾರದೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಇಂಡಿಗೊ A320 ವಿಮಾನದ ಕೆಳಭಾಗಕ್ಕೆ ಟ್ರಾವೆಲರ್​ ಡಿಕ್ಕಿಯಾಗುತ್ತಿದ್ದಂತೆ ಚಾಲಕ ಎಚ್ಚೆತ್ತುಕೊಂಡಿದ್ದಾನೆ. ಘಟನೆ ಸಂದರ್ಭ ಟೆಂಪೋ ಟ್ರಾವೆಲರ್​ನಲ್ಲಿ ಚಾಲಕ ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ ಎಂದು ವರದಿಯಾಗಿದೆ.

 ಘಟನೆ ಸಂಬಂಧ ಹೆಚ್ಚಿನ ತನಿಖೆ ಆರಂಭವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ.

See also  ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು!20 ವರ್ಷದ ಯುವತಿಗೆ ಆಗಿದ್ದೇನು? ವಿಡಿಯೋ ವೀಕ್ಷಿಸಿ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget   Ad Widget