ಕ್ರೈಂಬೆಂಗಳೂರುವೈರಲ್ ನ್ಯೂಸ್

ಯಲ್ಲಮ್ಮನಿಗೆ ಕೈ ಮುಗಿದು ಎಲ್ಲಾ ದೋಚಿದ ಕಳ್ಳರು! ಗುಡ್ಡದಲ್ಲಿ ಹುಂಡಿ ಎಸೆದು ಓಡಿದ್ದೇಕೆ ಖದೀಮರು?

ನ್ಯೂಸ್ ನಾಟೌಟ್: ದೇವರಿಗೆ ಕೈ ಮುಗಿದು, ದೇವಸ್ಥಾನದ ಹುಂಡಿ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಬೀದರ್‌ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದಲ್ಲಿ ಕಳೆದ ರಾತ್ರಿ(ನ.5) ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಯಲ್ಲಮ್ಮ ದೇವಸ್ಥಾನದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮುಖಕ್ಕೆ ಟವೆಲ್, ಮಾಸ್ಕ್ ಹಾಕಿಕೊಂಡು ಬಂದು ಹುಂಡಿ ಹೊತ್ತೊಯ್ದಿದ್ದಾರೆ. ಕಳ್ಳತನದ ದೃಶ್ಯ ದೇವಸ್ಥಾನದಲ್ಲಿ ಆಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸ್ಪ್ಯಾನರ್ ಬಳಸಿ ಖದೀಮರು ಕೀಲಿ‌ ಮುರಿಯಲು ಪ್ರಯತ್ನಿಸಿದ್ದಾರೆ.

ಕೀಲಿ ಮುರಿಯದ ಬಳಿಕ ಹುಂಡಿಯನ್ನೇ ಹೊತ್ತೊಯ್ದಿದ್ದಾರೆ. ಹುಂಡಿ‌ಯಲ್ಲಿ ಹಣವನ್ನು ದೋಚಿ, ದೇವಸ್ಥಾನದ ಬಳಿಯ ಗುಡ್ಡದಲ್ಲಿ ಹುಂಡಿ ಎಸೆದು ಹೋಗಿದ್ದಾರೆ.ಹುಂಡಿ ಹೊತ್ಯೊಯ್ಯುವ ದೃಶ್ಯ ಸಿಸಿಟಿವಿಯಲ್ಲೆ ಸೆರೆಯಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Related posts

ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದ ಸೇನಾ ವಾಹನವನ್ನು ಸ್ಪೋಟಿಸಿದ ನಕ್ಸಲರು..! 9 ಯೋಧರು ಹುತಾತ್ಮ , ಹಲವು ಯೋಧರು ಆಸ್ಪತ್ರೆಗೆ ದಾಖಲು..!

ಕಡಬ: ಪೊಲೀಸ್ ಜೀಪ್-ಖಾಸಗಿ ಬೊಲೆರೋ ಡಿಕ್ಕಿ: ಎಸ್ ಐ ರುಕ್ಮ ನಾಯಕ್ ಗೆ ಗಾಯ, ಅಪಾಯದಿಂದ ಪಾರು

ಗೂನಡ್ಕ: ಹಿಂದಿನಿಂದ ಬಂದು ಬಸ್ಸಿನೊಳಗೆ ನುಗ್ಗಿದ ಎಲ್‌ ಬೋರ್ಡ್‌ ಕಾರು