ಕ್ರೈಂವೈರಲ್ ನ್ಯೂಸ್

ದೇವಸ್ಥಾನದ ಆವರಣದಲ್ಲೇ ನಟಿಗೆ ಕಿಸ್ ಕೊಟ್ಟ ನಿರ್ದೇಶಕ, ಹಿಗ್ಗಾಮುಗ್ಗ ಜಾಡಿಸಿದ ನೆಟ್ಟಿಗರು!

221

ನ್ಯೂಸ್ ನಾಟೌಟ್: ದೇವಸ್ಥಾನ ಎಂದರೆ ಪವಿತ್ರವಾದ ಸ್ಥಳ. ಅಂತಹ ಸ್ಥಳದಲ್ಲಿಯೇ ನಿರ್ದೇಶಕನೋರ್ವ ನಟಿಯೊಬ್ಬಳಿಗೆ ಮುತ್ತಿಟ್ಟು ಇದೀಗ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ದೇವಸ್ಥಾನದ ಆವರಣದಲ್ಲಿ ಮಾಡಿದ ಆ ಒಂದು ಕೆಲಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನ ಛೀ..ಥೂ ಎಂದು ಉಗಿತಿದ್ದಾರೆ.

ಆದಿ ಪುರುಷ್ ಸಿನಿಮಾದ ನಿರ್ದೇಶಕ ಓಂ ರಾವತ್ ಹಾಗೂ ನಾಯಕಿ ಕೃತಿ ಸನೊನ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ದೇವರಿಗೆ ಕೈ ಮುಗಿದು ಪ್ರದಕ್ಷಿಣೆ ಹಾಕಿದ್ದಾರೆ. ದೇವಸ್ಥಾನದಿಂದ ಹೊರಬಂದ ಬಳಿಕ ನಾಯಕಿ ಕೃತಿ ಸನೋನ್ ಅವರನ್ನು ಕಳುಹಿಸಿ ಕೊಡುವ ವೇಳೆ ನಿರ್ದೇಶಕ ಓಂ ರಾವತ್ ಅವರ ಕೆನ್ನೆಗೆ ಮುತ್ತು ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು,ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು, ಭಕ್ತರು ಚಿತ್ರತಂಡದ ಸದಸ್ಯರ ವರ್ತನೆಗೆ ಕಿಡಿಕಾರಿದ್ದು ಇದು ಶೋಭೆ ತರುವಂತದ್ದಲ್ಲ ಎಂದು ಹರಿಹಾಯ್ದಿದ್ದಾರೆ.ದೇವಸ್ಥಾನ ಹಿಂದೂಗಳ ದೇವಾಲಯ.ಪವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.ಸಮಾಜಕ್ಕೆ ಮಾದರಿಯಾಗಿರುವವರೇ ಈ ರೀತಿ ವರ್ತಿಸಿದರೆ ಹೇಗೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

See also  'ಕಾಂತಾರ 1'ಗಿಂತ 7 ಪಟ್ಟು ಹೆಚ್ಚು ಬಜೆಟ್‌ನಲ್ಲಿ ತಯಾರಾಗ್ತಿದೆಯಾ 'ಕಾಂತಾರ 2'? ಈ ಬಾರಿಯ ಬಜೆಟ್ ಎಷ್ಟು? ಹೇಗಿರಲಿದೆ ಕಾಂತಾರ 2?
  Ad Widget   Ad Widget   Ad Widget   Ad Widget   Ad Widget   Ad Widget   Ad Widget