ವೈರಲ್ ನ್ಯೂಸ್

ಈ ದೇವಸ್ಥಾನದಲ್ಲಿ ಮುಸ್ಲಿಮರಿಗೆ ಪ್ರವೇಶ ನಿಷೇಧ! ಹಿಂದೂಗಳಿಗೂ ಡ್ರೆಸ್ ಕೋಡ್ ಕಡ್ಡಾಯ!

ನ್ಯೂಸ್ ನಾಟೌಟ್ :  ಪುರಾತನ ಹನುಮಾನ್ ದೇವಾಲಯದಲ್ಲಿ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಹಿಂದೂ ಭಕ್ತರಿಗೆ ಡ್ರೆಸ್ ಕೋಡ್‌ಗೆ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡರುವ ಘಟನೆ ಉತ್ತರ ಪ್ರದೇಶದ ಅಲಿಗಢ್‌ನಲ್ಲಿ ನಡೆದಿದೆ.

ಗಿಲ್ಹಾರಿ ಹನುಮಾನ್ ದೇವಸ್ಥಾನ ಎಂದು ಕರೆಯಲ್ಪಡುವ ಅಚಲತಲಾಬ್ ಪ್ರದೇಶದಲ್ಲಿನ ದೇವಾಲಯದ ಹೊರಗೆ ಹಾಕಲಾದ ಪೋಸ್ಟರ್‌ಗಳಲ್ಲಿ ಮುಸ್ಲಿಮರಿಗೆ  ದೇಗುಲದೊಳಗೆ ಅನುಮತಿ ಇಲ್ಲ ಎನ್ನಲಾಗಿದ್ದು, ಹಿಂದೂ ಭಕ್ತರಿಗೆ ಡ್ರೆಸ್ ಕೋಡ್ ಜಾರಿಗೆ ತರಲಾಗಿದೆ, ಜೀನ್ಸ್ ಮತ್ತು ಚಿಕ್ಕ ಮತ್ತು ಚಿಕ್ಕದಾದ ಬಟ್ಟೆಗಳನ್ನು ಧರಿಸಿ ದೇವಾಲಯವನ್ನು ಪ್ರವೇಶಿಸಬಾರದು ಎಂದು ಹೇಳಲಾಗಿದೆ. 

ಧಾರ್ಮಿಕ ಸ್ಥಳದಲ್ಲಿ ಇಂತಹ ಬಟ್ಟೆಗಳನ್ನು ಧರಿಸುವುದು ಅಗೌರವ ತೋರಿದಂತೆ ಆಗುತ್ತದೆ ಎಂದು ದೇವಸ್ಥಾನದ ಮಹಂತ್ ಕೌಶಲ್ ನಾಥ್ ಹೇಳಿದ್ದಾರೆ. ಜನರು ದೇವಸ್ಥಾನಕ್ಕೆ ಸಭ್ಯವಾಗಿರುವ ಡ್ರೆಸ್ ಹಾಕಿಕೊಂಡು ಬರಬೇಕು. ಅವರು ಹೊರಗೆ ಏನು ಬೇಕಾದರೂ ಹಾಕಿಕೊಳ್ಳಬಹುದು. ಪೂಜೆ ಮಾಡದ ಮುಸ್ಲಿಮರು ದೇವಸ್ಥಾನಕ್ಕೆ ಬರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

Related posts

ವಿಜಯೇಂದ್ರ ನೀನು ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ ಎಂದ ರಮೇಶ್‌ ಜಾರಕಿಹೊಳಿ..! ಸ್ವಪಕ್ಷೀಯರಲ್ಲಿ ತೀವ್ರಗೊಂಡ ಬಣ ಬಡಿದಾಟ, ಏಕವಚನದಲ್ಲೇ ವಾಗ್ದಾಳಿ..!

ಲೋಕಸಭಾ ಚುನಾವಣೆ ಹಿನ್ನೆಲೆ, ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚಾರ..? ಎಷ್ಟೋತ್ತಿಗೆ..? ಹೇಗೆ..?

1963ರಲ್ಲಿ ಪೆಟ್ರೋಲ್ ಖರೀದಿಸಿದ ಬಿಲ್ ವೈರಲ್..! 60 ವರ್ಷಗಳ ಹಿಂದೆ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ..?