ಕ್ರೈಂವಿಡಿಯೋವೈರಲ್ ನ್ಯೂಸ್

ಗರ್ಭಗುಡಿ ಪ್ರವೇಶಿಸಿದ ಮಹಿಳೆಯನ್ನು ಎಳೆದು ಹೊರ ಹಾಕಿದ್ದೇಕೆ ಸಿಬ್ಬಂದಿ..! ರಾಜವಂಶಸ್ಥೆಯನ್ನು ಬಂಧಿಸಿದ್ದೇಕೆ ಪೊಲೀಸರು? ಅಷ್ಟಕ್ಕೂ ಮಧ್ಯರಾತ್ರಿ ನಡೆದದ್ದಾದರೂ ಏನು? ಇಲ್ಲಿದೆ ವೈರಲ್ ವಿಡಿಯೋ

258

ನ್ಯೂಸ್ ನಾಟೌಟ್ : ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಬಳಿಕ, ಕೆಲವು ಆಚರಣೆ ಮತ್ತು ಸಂಪ್ರದಾಯಗಳ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಮಧ್ಯಪ್ರದೇಶದ ಪ್ರತಿಷ್ಠಿತ ರಾಜಮನೆತನಕ್ಕೆ ಸೇರಿದ ಮಹಿಳೆಯೊಬ್ಬರನ್ನು ದೇವಸ್ಥಾನದಿಂದ ಎಳೆದು ಹೊರಗೆ ಹಾಕಿದ್ದಲ್ಲದೆ, ಅವರನ್ನು ಬಂಧಿಸಿದ ಘಟನೆ ಪನ್ನಾದಲ್ಲಿ ನಿನ್ನೆ(ಸೆ.9) ನಡೆದಿದೆ.

ಜನ್ಮಾಷ್ಟಮಿ ಆಚರಣೆ ವೇಳೆ ರಾಜಮನೆತನದ ಜಿತೇಶ್ವರಿ ದೇವಿ ಪವಿತ್ರ ಗರ್ಭಗುಡಿಯನ್ನು ಪ್ರವೇಶಿಸುವ ಮೂಲಕ ದೇವಸ್ಥಾನದ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದಡಿ ಶುಕ್ರವಾರ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಪನ್ನಾದ ಶ್ರೀ ಜುಗಲ್ ಕಿಶೋರ್ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಪ್ರತಿ ವರ್ಷವೂ ಮಧ್ಯರಾತ್ರಿ ವಿಶೇಷ ಪೂಜೆ ನಡೆಯುತ್ತದೆ. ಬುಂದೇಲಖಂಡ ಪ್ರದೇಶದಲ್ಲಿ ಈ ದೇವಸ್ಥಾನವು ಜನಪ್ರಿಯ ಧಾರ್ಮಿಕ ತಾಣವಾಗಿದೆ.

ದೇವಸ್ಥಾನದ ಸಿಬ್ಬಂದಿ ಪ್ರಕಾರ, ಜನ್ಮಾಷ್ಟಮಿ ಆಚರಣೆಗಳನ್ನು ಹಾಳುಮಾಡಲು ಜಿತೇಶ್ವರಿ ದೇವಿ ಪ್ರಯತ್ನಿಸಿದ್ದರು. ದೇವರಿಗೆ ತಾವೇ ಆರತಿ ಮಾಡಬೇಕು ಎಂದು ಪಟ್ಟುಹಿಡಿದಿದ್ದರು. ಇದರ ಬಳಿಕ ಅವರು ಪವಿತ್ರ ಗರ್ಭಗುಡಿಯನ್ನು ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.

ಈ ವೇಳೆ ಉಂಟಾದ ಗದ್ದಲದ ಕಾರಣ ಪೊಲೀಸರು ಒಳಗೆ ಪ್ರವೇಶಿಸುವಂತಾಯಿತು. ದೇವಸ್ಥಾನದ ಆವರಣದಿಂದ ಹೊರಗೆ ಹೋಗುವಂತೆ ಅವರು ಜಿತೇಶ್ವರಿ ದೇವಿಗೆ ಸೂಚಿಸಿದ್ದರು. ಜಿತೇಶ್ವರಿ ಮದ್ಯಪಾನ ಮಾಡಿದ್ದರು. ದೇವಸ್ಥಾನದ ಅಧಿಕಾರಿಗಳ ಜತೆ ಜಗಳವಾಡಲು ಪ್ರಯತ್ನಿಸಿದ್ದರು ಎಂದು ಸ್ಥಳದಲ್ಲಿದ್ದ ಜನರು ತಿಳಿಸಿದ್ದಾರೆ. ಈ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಯರಲ್ ಆಗಿದ್ದು, ಎಲ್ಲೆಡೆ ಈ ಕುರಿತು ಪರ ವಿರೋಧ ಚರ್ಚೆಗಳು ಜೋರಾಗಿವೆ.

See also  "ಇನ್ಮುಂದೆ ನಾನು ಸೌಜನ್ಯಳ ತಂಟೆಗೇ ಹೋಗುವುದಿಲ್ಲ" ಆಹೋರಾತ್ರ- V2 ಸೂರ್ಯ ನಡುವಿನ ಸಂಭಾಷಣೆ ಆಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget