Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹೆಂಡತಿಯ ಎದುರೇ ಗಂಡನ ಶಿರಚ್ಛೇದ ಮಾಡಿ ತಲೆ ತೆಗೆದುಕೊಂಡು ಪರಾರಿ..! ದೇವಸ್ಥಾನದ ಬಳಿ ರುಂಡ ಪತ್ತೆ..!

842

ನ್ಯೂಸ್ ನಾಟೌಟ್: ಪತ್ನಿ ಎದುರೇ ಪತಿಯ ಶಿರಚ್ಛೇದ ಮಾಡಿರುವ ಘಟನೆ ತಮಿಳುನಾಡಿನ ತೆಂಕಸಿ ಬಳಿ ನಡೆದಿದೆ. ಮನೆಯಿಂದ 8 ಕಿ.ಮೀ ದೂರದಲ್ಲಿರುವ ದೇವಸ್ಥಾನದ ಬಳಿ ರುಂಡ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ತೆಂಕಸಿಯಲ್ಲಿ ಭೀಕರ ಹಿಂಸಾಚಾರ ನಡೆದಿತ್ತು. ಅಪರಿಚಿತ ಗುಂಪೊಂದು ಹೆಂಡತಿಯ ಎದುರೇ ಶಿರಚ್ಛೇದ ಮಾಡಿ, ತಲೆ ತೆಗೆದುಕೊಂಡು ಪರಾರಿಯಾಗಿದ್ದರು. ಅಪರಾಧ ಸ್ಥಳದಿಂದ ಸುಮಾರು 8 ಕಿ.ಮೀ ದೂರದಲ್ಲಿ ದೇವಸ್ಥಾನದ ಬಳಿ ರುಂಡ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು 35 ವರ್ಷದ ಕುಥಾಲಿಂಗಂ ಎಂದು ಗುರುತಿಸಲಾಗಿದೆ. ಆತ ತಮ್ಮ ಪತ್ನಿಯೊಂದಿಗೆ ಕೀಳಪುಲಿಯೂರಿನಲ್ಲಿ ವಾಸಿಸುತ್ತಿದ್ದರು. ಪೊಲೀಸ್ ವರದಿಗಳ ಪ್ರಕಾರ ದಂಪತಿ ಏಪ್ರಿಲ್ 16ರಂದು ಸಂಜೆ ತಮ್ಮ ಹಳ್ಳಿಯಲ್ಲಿರುವ ಪಿಡಿಎಸ್ ಅಂಗಡಿಗೆ ಹೋಗಿದ್ದಾಗ ನಾಲ್ವರ ಗುಂಪೊಂದು ಅವರ ಮೇಲೆ ಹೊಂಚು ದಾಳಿ ನಡೆಸಿತ್ತು.

ಕುಥಾಲಿಂಗಂ ಅವರ ಮೇಲೆ ದಾಳಿ ನಡೆಸಿದಾಗ ಪತ್ನಿ ಅದನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದರು, ಆದರೆ ಅವರು ಆಕೆಯನ್ನು ತಳ್ಳಿ ಕುತ್ತಿಗೆಯನ್ನೇ ಕಡಿದಿದ್ದಾರೆ. ಆ ಗುಂಪು ಅವರ ಶಿರಚ್ಛೇದನ ಮಾಡಿ ತಲೆಯೊಂದಿಗೆ ಪರಾರಿಯಾಗಿತ್ತು.
ಗಾಬರಿಗೊಂಡ ಮಹಿಳೆ ತಕ್ಷಣ ತೆಂಕಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಪರಿಚಿತ ದಾಳಿಕೋರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಕಾಸಿಮಜೋರ್ಪುರಂನ ದೇವಾಲಯವೊಂದರ ಬಳಿ ಕತ್ತರಿಸಿದ ತಲೆ ಪತ್ತೆಯಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಮೃತದೇಹ ಮತ್ತು ತಲೆಯನ್ನು ಮರಣೋತ್ತರ ಪರೀಕ್ಷೆಗಾಗಿ ತೆಂಕಾಸಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಇದು ಸೇಡಿಗಾಗಿ ಮಾಡಿದ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. 2023ರಲ್ಲೂ ದೇವಸ್ಥಾನದ ಬಳಿ ಒಂದು ಕೊಲೆ ನಡೆದಿತ್ತು, ಈ ಮೃತಪಟ್ಟ ವ್ಯಕ್ತಿ ಆ ಕೊಲೆಯಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಚೀನಾದ ಈ ರೆಸ್ಟೋರೆಂಟ್ ನಲ್ಲಿ ಆನೆ ಲದ್ದಿಯಿಂದ ತಯಾರಾಗುತ್ತೆ ಲಡ್ಡು!!ಇದನ್ನು ತಿನ್ನಲೆಂದೇ ಕುಟುಂಬಸಮೇತರಾಗಿ ಜನ ಬರ್ತಾರೆ!!

ಕಲ್ಲಿದ್ದಲು ಇಲಾಖೆಯ 200 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

See also  ನಾಳಿನ ಮುಷ್ಕರ ಮುಂದೂಡುವಂತೆ ಹೈಕೋರ್ಟ್ ಸೂಚನೆ,
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget