Latestರಾಜ್ಯ

ಪ್ರಸಿದ್ಧ ಪುಣ್ಯಕ್ಷೇತ್ರ ಮುರುಡೇಶ್ವರದಲ್ಲಿ ವಸ್ತ್ರ ಸಂಹಿತೆ ಜಾರಿ..! ಈ ಬಗ್ಗೆ ಆಡಳಿತ ಮಂಡಳಿ ಹೇಳಿದ್ದೇನು..?

708

ನ್ಯೂಸ್ ನಾಟೌಟ್: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮುರುಡೇಶ್ವರ ದೇವಾಲಯದಲ್ಲಿ ಅಧಿಕೃತವಾಗಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಸದ್ಯ ಈ ಸಂಬಂಧ ಆಡಳಿತ ಮಂಡಳಿಯು ದೇವಾಲಯದ ಮುಂಭಾಗದಲ್ಲಿ ಸೂಚನ ಫಲಕ ಅಳವಡಿಸಿದೆ.

ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ದೇವರ ದೇವಸ್ಥಾನವು ಪ್ರಸಿದ್ಧ ಧಾರ್ಮಿಕ ಪುಣ್ಯ ಸ್ಥಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಭಾರತೀಯ ಸಾಂಪ್ರದಾಯದಂತೆ ಉಡುಪು ಧರಿಸುವಂತೆ ಸೂಚಿಸಲಾಗಿದೆ. ಅಂಗಿ, ಲುಂಗಿ, ಕುರ್ತಾ ಪೈಜಾಮ, ಫಾರ್ಮಲ್​ ಪ್ಯಾಂಟ್, ಶರ್ಟ್​ ಧರಿಸಬಹುದು. ಮಹಿಳೆಯರು ಸಾರಿ, ಸಾಲ್ವರ್, ಚೂಡಿದಾರ ಧರಿಸಿ ದೇವರ ದರ್ಶನ ಪಡೆಯಬಹುದು ಎಂದು ತಿಳಿಸಲಾಗಿದೆ.

ಪುರುಷರು, ಮಹಿಳೆಯರು ಟೀಶರ್ಟ್​, ಆಫ್​ ಪ್ಯಾಂಟ್, ಸ್ಕರ್ಟ್​, ಆಫ್​ತೋಳಿನ ಟೀಶರ್ಟ್​, ಪುರುಷರು ಬನಿಯನ್ ಧರಿಸಿ ಬರುವಂತಿಲ್ಲ. ದೇವಾಲಯದ ಓಳಗೆ ಪಾಶ್ಚಿಮಾತ್ಯ ಶೈಲಿಯ ಕ್ಯಾಶುಯಲ್ ಡ್ರೆಸ್​​ಗಳಿಗೆ ಅನುಮತಿ ನಿರಾಕರಣೆ ಮಾಡಲಾಗಿದೆ. ಈ ಬಗ್ಗೆ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಳವಡಿಸಿ ಭಕ್ತರಿಗೆ ಸೂಚನೆ ನೀಡಲಾಗಿದೆ.
ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಇರಾನ್ ಗೆ ದಾಳಿ ಮಾಡಲು ಭಾರತದ ವಾಯುಸೀಮೆಯನ್ನು ಬಳಸಿತ್ತಾ ಅಮೆರಿಕ..? ಇಲ್ಲಿದೆ ಸಂಪೂರ್ಣ ಮಾಹಿತಿ

ಶಿರಸಿ: ಜಲಪಾತ ವೀಕ್ಷಣೆಗೆ ಹೋದ ಯುವಕ ಕಾಲು ಜಾರಿ ಕಣ್ಮರೆ..! ಕೊಚ್ಚಿ ಹೋಗಿರುವ ಯುವಕನಿಗಾಗಿ ಹುಡುಕಾಟ..!

See also  ಬಾಂಬ್ ಇಡಲು ಯತ್ನಿಸುತ್ತಿರುವಾಗಲೇ ಆರೋಪಿ ಕೈಯಲ್ಲಿದ್ದ ಬಾಂಬ್ ಸ್ಫೋಟ..! ಆಸ್ಪತ್ರೆಗೆ ದಾಖಲಿಸಿದರೂ ಫಲಿಸದ ಚಿಕಿತ್ಸೆ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget