ನ್ಯೂಸ್ ನಾಟೌಟ್ : ಚಿದಂಬರಂ ಜಿಲ್ಲೆಯ ಗ್ರಾಮವೊಂದರ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಬಳಸಲ್ಪಟ್ಟ ಒಂದು ನಿಂಬೆ ಹಣ್ಣನ್ನು 13,000 ರೂ.ಗೆ ಹರಾಜು ಮಾಡಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಶುಕ್ರವಾರ(ಫೆ.28) ತಿಳಿಸಿದ್ದಾರೆ.
ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯದ ಭಾಗವಾಗಿ ವಾರ್ಷಿಕ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ವಿಳಕ್ಕೇತಿ ಗ್ರಾಮದ ಪಜಮತಿನ್ನಿ ಕರುಪ್ಪ ಈಶ್ವರನ್ ದೇವಸ್ಥಾನದಲ್ಲಿ ಬುಧವಾರ ಮಧ್ಯರಾತ್ರಿ ಸಾರ್ವಜನಿಕ ಹರಾಜು ನಡೆಸಿತ್ತು,
ನಿಂಬೆಹಣ್ಣು, ಬೆಳ್ಳಿಯ ಉಂಗುರ, ಬೆಳ್ಳಿಯ ನಾಣ್ಯ ಸೇರಿದಂತೆ ಮುಖ್ಯ ದೇವರ ವಿಗ್ರಹದ ಮೇಲೆ ಇರಿಸಲಾಗಿರುವ ಪವಿತ್ರ ವಸ್ತುಗಳನ್ನು ಭಕ್ತರು ವರ್ಷವೂ ಬಿಡ್ ಮಾಡುತ್ತಾರೆ ಎನ್ನಲಾಗಿದೆ.
ನಿಂಬೆ ಹಣ್ಣನ್ನು ತಂಗರಾಜ್ ಎನ್ನುವವರು 13,000 ರೂ.ಗೆ ಪಡೆದುಕೊಂಡರೆ, ಅರಚಲೂರಿನ ಚಿದಂಬರಂ ಬೆಳ್ಳಿಯ ಉಂಗುರವನ್ನು 43,100 ರೂ.ಗೆ ಖರೀದಿಸಿದರು. ರವಿಕುಮಾರ್ ಮತ್ತು ಬಾನುಪ್ರಿಯಾ ಜಂಟಿಯಾಗಿ ಬೆಳ್ಳಿ ನಾಣ್ಯಕ್ಕೆ 35,000 ರೂ.ನೀಡಿದರು.
ಹರಾಜಿನ ನಂತರ ವಿಶೇಷ ಪೂಜೆಗಾಗಿ ವಸ್ತುಗಳನ್ನು ದೇವರ ಮುಂದೆ ಇಡಲಾಯಿತು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪೂಜ್ಯ ವಸ್ತುಗಳನ್ನು ಹೊಂದುವುದರಿಂದ ತಮ್ಮ ಕುಟುಂಬಗಳಿಗೆ ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ಭಕ್ತರು ನಂಬಿಕೆ.