ಕ್ರೈಂ

ದೇಗುಲದೊಳಗೆ ಮಾವುತನನ್ನೇ ತುಳಿದು ಕೊಂದ ಆನೆ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ದೇಗುಲದೊಳಗೆಯೇ ಆನೆಯೊಂದು ಮಾವುತನನ್ನು ತುಳಿದು ಕೊಂದ ಆಘಾತಕಾರಿ ಘಟನೆ ಕೇರಳದ ವೈಕೋಮ್‌ನಲ್ಲಿ ನಡೆದಿದೆ. ಮೃತಪಟ್ಟ ಮಾವುತನನ್ನು ಅರವಿಂದ್ (26) ಎಂದು ಗುರುತಿಸಲಾಗಿದ್ದು, ಈತ ಪುತ್ತುಪ್ಪಲ್ಲಿ ಮೂಲದ ನಿವಾಸಿ ಎನ್ನಲಾಗಿದೆ.

ಅರವಿಂದ್ ಅವರು ಕುಂಜುಲಕ್ಷ್ಮಿಯ ಎರಡನೇ ಮಾವುತರಾಗಿ ಕಳೆದ ತಿಂಗಳಿನಿಂದ ಸೇವೆ ಆರಂಭಿಸಿದ್ದರು. ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ(ಎ.೩) ರಾತ್ರಿ 9 ಗಂಟೆ ಸುಮಾರಿಗೆ ದೇವಸ್ಥಾನದ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಕುಂಜುಲಕ್ಷ್ಮಿ ಎಂದು ಕರೆಯಲ್ಪಡುವ ಆನೆಯು ಸಾಂಪ್ರದಾಯಿಕ ಹಣೆಪಟ್ಟಿ ಇಡಲಾಗಿತ್ತು.

ಇದೇ ಸಂದರ್ಭದಲ್ಲಿ ಏಕಾಏಕಿ ಕೋಪಗೊಂಡ ಆನೆಯು ತನ್ನ ಜೊತೆ ಇದ್ದ ಮಾವುತ ಅರವಿಂದ್‌ನನ್ನು ತುಳಿದಿದೆ. ಕೂಡಲೇ ದೇವಸ್ಥಾನದಲ್ಲಿದ್ದ ಸ್ಥಳೀಯರು ಸೇರಿ ಅರವಿಂದ್‌ನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ತಕ್ಷಣವೇ ವೈಕಂ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಪರಿಣಾಮ ಅರವಿಂದ್‌ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

Related posts

ಸರಪಳಿಯಲ್ಲಿ ಕಟ್ಟಿಹಾಕಿದ ಸ್ಥಿತಿಯಲ್ಲಿ ಕಾಡಿನೊಳಗೆ ವಿದೇಶಿ ಮಹಿಳೆ ಪತ್ತೆ..? ಅಳುತ್ತಿರುವುದು ಕೇಳಿ ಓಡಿದ ಕುರಿಗಾಹಿಗಳು..!

ಮದರಸಾವನ್ನು ಧ್ವಂಸಗೊಳಿಸಿದ್ದೇಕೆ ಅಧಿಕಾರಿಗಳು..? ತೀವ್ರಗೊಂಡ ಕೋಮು ಉದ್ವಿಗ್ನತೆ..! ಕಂಡಲ್ಲಿ ಗುಂಡಿಗೆ ಆದೇಶ!

ಸುಳ್ಯ: ಆನೆಗುಂಡಿ ಚೆಡಾವಿನಲ್ಲಿ ಕಾರಿಗೆ ಲಾರಿ ಡಿಕ್ಕಿ, ಈಶ್ವರಮಂಗಲದ ಕುಟುಂಬ ಪಾರು