ಕರಾವಳಿದೇಶ-ಪ್ರಪಂಚವೈರಲ್ ನ್ಯೂಸ್

ದೇವಸ್ಥಾನದ ಬ್ಯಾನರ್ ನಲ್ಲಿ ದೇವಿಯ ಚಿತ್ರದ ಜೊತೆ ಮಿಯಾ ಖಲೀಫಾ ಫೋಟೋ..! ಧಾರ್ಮಿಕ ಉತ್ಸವದಲ್ಲಿ ಏನಿದು ಎಡವಟ್ಟು..?

ನ್ಯೂಸ್ ನಾಟೌಟ್: ಧಾರ್ಮಿಕ ಉತ್ಸವಕ್ಕಾಗಿ ಅಳವಡಿಸಲಾಗಿದ್ದ ಬ್ಯಾನರ್ ನಲ್ಲಿ ಮಾಜಿ ನೀಲಿಚಿತ್ರ ತಾರೆ ಮಿಯಾ ಖಲೀಫಾ ಚಿತ್ರ ಪ್ರದರ್ಶನ ಮಾಡಿದ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ.
ತಮಿಳುನಾಡಿನಾದ್ಯಂತ ಇರುವ ದೇವಾಲಯಗಳಲ್ಲಿ ‘ಅಮ್ಮನ್’ ದೇವಿಯನ್ನು ಪೂಜಿಸುವ ‘ಆದಿ’ ಹಬ್ಬಕ್ಕಾಗಿ ಈ ಹೋರ್ಡಿಂಗ್ ಅನ್ನು ಅಳವಡಿಸಲಾಗಿತ್ತು. ಹಲವಾರು ದಿನಗಳವರೆಗೆ ನಡೆಯುವ ಉತ್ಸವದಲ್ಲಿ ಭಕ್ತರು ಭಾಗವಹಿಸುತ್ತಾರೆ.

ಈ ಬೃಹತ್ ಹಬ್ಬದ ಭಾಗವಾಗಿ, ಕುರುವಿಮಲೈನಲ್ಲಿರುವ ನಾಗತಮ್ಮನ್ ಮತ್ತು ಸೆಲ್ಲಿಯಮ್ಮನ್ ದೇವಾಲಯಗಳಲ್ಲಿ ಹಬ್ಬದ ದೀಪಗಳ ಜತೆಗೆ ಹೋರ್ಡಿಂಗ್‌ಗಳನ್ನು ಹಾಕಲಾಗಿದ್ದು, ಅದರಲ್ಲಿ ಮಿಯಾ ಖಲೀಫಾ ಚಿತ್ರವು ದೇವತೆಗಳ ಚಿತ್ರಗಳೊಂದಿಗೆ ಕಾಣಿಸಿಕೊಂಡಿದ್ದು ಹೋರ್ಡಿಂಗ್‌ ನ ಫೋಟೋ ವೈರಲ್ ಆಗಿದೆ. ಮಿಯಾ ಖಲೀಫಾ ಚಿತ್ರವನ್ನು ತಲೆಯ ಮೇಲೆ ಹಾಲಿನ ಬಿಂದಿಗೆ ಒಯ್ಯುತ್ತಿರುವಂತೆ ಕಾಣುವಂತೆ ಮಾರ್ಪಡಿಸಲಾಗಿತ್ತು. ಚಿತ್ರ ವೈರಲ್ ಆದ ನಂತರ ಭಾರೀ ಟೀಕೆ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಅದನ್ನು ತೆಗೆದುಹಾಕಿದ್ದಾರೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/dakshina-kannada-udupi-kannada-news-scientist-ka-bengalu/
https://newsnotout.com/2024/08/wayanad-earth-quack-fear-kannada-news-kerala-landslide/
https://newsnotout.com/2024/08/airplane-crash-kannada-news-live-video-kannada-news-brezil/
https://newsnotout.com/2024/08/cat-bite-women-nomore-kannada-news-viral-issue-home-pet/
https://newsnotout.com/2024/08/shek-hasina-suspence-and-bangladesh-violance-kananda-news/

Related posts

ಗಂಗೆಯಲ್ಲಿ ಮಿಂದು ಪಾವನಳಾದ ಸನ್ನಿ ಲಿಯೋನ್‌ಗೆ ನೆಟ್ಟಿಗರು ಹೀಗೆ ಹೇಳೋದಾ? ಅಷ್ಟಕ್ಕೂ ಏನು ಹೇಳಿದ್ರು ಗೊತ್ತಾ?

ಕಷ್ಟಪಟ್ರೆ ಗೆದ್ದೇ ಗೆಲ್ತಿವಿ ಅನ್ನೋದನ್ನ ಇಡೀ ದೇಶಕ್ಕೇ ಸಾರಿದ ಮಹಾನ್ ಚೇತನ ಇನ್ನಿಲ್ಲ, ನ್ಯಾಚುರಲ್ ಐಸ್ ಕ್ರೀಂ ಸ್ಥಾಪಿಸಿದ ಕರಾವಳಿಯ ದಿಗ್ಗಜನ ನಿಧನಕ್ಕೆ ಕಂಬನಿ ಮಿಡಿದ ಅಭಿಮಾನಿಗಳು

ಅಬ್ಬಬ್ಬಾ ಒಂದಲ್ಲ, ಏಳಲ್ಲ, ಬರೋಬ್ಬರಿ 20 ಕಾಡಾನೆಗಳ ಹಿಂಡು..!ಕ್ಯಾಮರಾ ಕಣ್ಣಿಗೆ ಸೆರೆಯಾದ ದೃಶ್ಯ ನೋಡಿ ನೆಟ್ಟಿಗರೇ ಶಾಕ್..!