ರಾಜ್ಯವೈರಲ್ ನ್ಯೂಸ್ಸಿನಿಮಾ

ತೆಲುಗು ಬಿಗ್ ಬಾಸ್​ ಗೆದ್ದ ಕನ್ನಡಿಗ..! ಮೈಸೂರು ಮೂಲದ ಯುವಕನಿಗೆ ಬಿಗ್ ಬಾಸ್ ಕಿರೀಟ

252

ನ್ಯೂಸ್ ನಾಟೌಟ್: ತೆಲುಗು ಬಿಗ್ ಬಾಸ್ ಸೀಸನ್ 8’ರಲ್ಲಿ ಕನ್ನಡದ ಹುಡುಗ ನಿಖಿಲ್ ಗೆದ್ದಿದ್ದಾರೆ. ನಟ ರಾಮ್ ಚರಣ್ ಚೆಕ್ ಹಾಗೂ ಅವಾರ್ಡ್​ನ ನಿಖಿಲ್ ಮಳಿಯಕ್ಕಲ್ ​ಗೆ ನೀಡಿದ್ದಾರೆ. ಬೇರೆ ಭಾಷೆಗೆ ತೆರಳಿ ಕನ್ನಡದ ಹುಡುಗ ಗೆದ್ದಿರುವುದರಿಂದ ದಾಖಲೆ ಸೃಷ್ಟಿ ಆಗಿದೆ.

ನಿಖಿಲ್ ಅವರು ಮೂಲತಃ ಕರ್ನಾಟಕದವರು. ಅವರು ಹುಟ್ಟಿದ್ದು ಮೈಸೂರಿನಲ್ಲಿ. ಅವರಿಗೆ ತೆಲುಗು ಚಿತ್ರರಂಗದ ಜೊತೆ, ಅಲ್ಲಿನ ಕಿರುತೆರೆ ಜೊತೆ ಒಳ್ಳೆಯ ನಂಟು ಬೆಳೆದಿದೆ. ಅವರು ನಟ ಹಾಗೂ ಯೂಟ್ಯೂಬರ್ ಆಗಿದ್ದಾರೆ. ನಿಖಿಲ್​ಗೆ ಇನ್ನೂ 27 ವರ್ಷ. ಅವರು 2016ರಲ್ಲಿ ‘ಊಟಿ’ ಹೆಸರಿನ ಕನ್ನಡ ಸಿನಿಮಾ ಮಾಡಿದರು. 2019ರಲ್ಲಿ ಪ್ರಸಾರ ಆರಂಭಿಸಿದ ತೆಲುಗಿನ ‘ಗೋರಿಂಟಕು’ ಧಾರಾವಾಹಿ ಮೂಲಕ ಅವರು ತೆಲುಗು ರಂಗದಲ್ಲಿ ಫೇಮಸ್ ಆದರು.

ನಿಖಿಲ್ ಅವರು ಸೆಪ್ಟೆಂಬರ್ 1ರಂದು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಬಿಗ್ ಬಾಸ್ ​ನಲ್ಲಿ ಭರ್ಜರಿ ಮನರಂಜನೆ ನೀಡಿ ಗಮನ ಸೆಳೆದಿದ್ದರು. ಈಗ ಬಿಗ್ ಬಾಸ್ ವಿನ್ ಆಗಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಅವಾರ್ಡ್​ ಹಣ ಸಿಕ್ಕಿದೆ.

https://newsnotout.com/2024/12/kannada-news-fisher-man-chitradurga-viral-news/
See also  ಉಡುಪಿ: ಕೊಡಪಾನ ತೆಗೆಯಲು ಬಾವಿಗೆ ಇಳಿದ ವ್ಯಕ್ತಿ ಬಿದ್ದು ಸಾವು..! ಹೋಟೆಲ್‌ ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget