ಕ್ರೈಂ

ಪ್ರಕರಣವೊಂದಕ್ಕೆ ವಿಚಾರಣೆಗೆ ಕರೆತಂದ ವ್ಯಕ್ತಿಗೆ ಮೂರ್ಛೆ ರೋಗ..!,ಪೊಲೀಸ್ ಸ್ಟೇಶನ್ ಎದುರಲ್ಲೇ ಉಸಿರುಚೆಲ್ಲಿದ ಯುವಕ,ಏನಿದು ಘಟನೆ?ಯಾವುದು ಆ ಪ್ರಕರಣ?

275

ನ್ಯೂಸ್ ನಾಟೌಟ್ : ವಿಚಾರಣೆಗೆಂದು ಪೊಲೀಸ್ ಸ್ಟೇಶನ್‌ಗೆ ಬಂದಿದ್ದ ಯುವಕನೋರ್ವ ಉಸಿರು ಚೆಲ್ಲಿದ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ವರದಿಯಾಗಿದೆ. ಪ್ರಕರಣವೊಂದರಲ್ಲಿ ಆತನನ್ನು ವಿಚಾರಣೆಗೆ ಕರೆತಂದಾಗ ಆತ ಮೂರ್ಛೆ ರೋಗ ಹೊಡೆದು ಕುಸಿದು ಬಿದ್ದು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾನೆ.

ಬೆಳ್ಳಂಪಲ್ಲಿ ಪಟ್ಟಣದ ಟೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ 26 (ಶನಿವಾರ) ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ದೃಶ್ಯ ಪೊಲೀಸ್ ಠಾಣೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.ಸೋಮವಾರ ದೃಶ್ಯಗಳು ಹೊರಬಿದ್ದಿದ್ದು ನಿಜಾಂಶ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಕೀರ್ತಿ ಅಂಜಿ (25) ಎಂಬಾತನನ್ನು ಮಹಿಳೆಯೊಬ್ಬಳ ಮನೆಯ ಮೇಲೆ ಕಲ್ಲು ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಠಾಣೆಗೆ ಈ ಯುವಕನನ್ನು ಕರೆತರಲಾಗಿತ್ತು. ಠಾಣೆಯಲ್ಲಿ ಕುರ್ಚಿಯ ಮೇಲೆ ಕುಳಿತು ಮೊಬೈಲ್ ಬಳಸುತ್ತಿದ್ದಾಗ ಆತನಿಗೆ ಇದ್ದಕ್ಕಿದ್ದಂತೆ ಮೂರ್ಛೆ ರೋಗ ಕಾಣಿಸಿಕೊಂಡಿದೆ.

ಇಬ್ಬರು ಪೊಲೀಸರು ಯುವಕರ ಬಳಿ ಬಂದು ಆತನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದು ವಿಡಿಯೋ ಕ್ಲಿಪ್‌ನಲ್ಲಿದೆ.  ಆತನನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಯುವಕನ ಕುಟುಂಬದವರು ದೂರು ದಾಖಲಿಸಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.

See also  ಐಫೋನ್‌ ಪ್ರೊ-12 ಆಸೆ ತೋರಿಸಿ 98,972 ರೂ. ವಂಚನೆ...!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget