Uncategorized

ದಾಖಲೆಗಳನ್ನು ಮುರಿದು ಮುನ್ನುಗುತ್ತಿರುವ ಕಾರು..! ಗ್ರಾಹಕರು ಅತಿ ಹೆಚ್ಚು ಖರೀದಿಸುತ್ತಿರುವ ಕಾರು ಯಾವುದು ಗೊತ್ತಾ..?

ನ್ಯೂಸ್ ನಾಟೌಟ್ :  ಮಾರುತಿ ಸುಜುಕಿ ದೇಶದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡುವ ಕಂಪನಿಯಾಗಿ ಹೊರಹೊಮ್ಮಿದೆ. ಅಕ್ಟೋಬರ್ 2023ರಲ್ಲಿ, ಅದರ ಮಾರಾಟವು ವಾರ್ಷಿಕ ಆಧಾರದ ಮೇಲೆ 19 ಪ್ರತಿಶತದಷ್ಟು ಅಂದರೆ  1,99,217 ಯುನಿಟ್‌ಗಳಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಖ್ಯೆಯೊಂದಿಗೆ, ತನ್ನ ಮಾಸಿಕ ಮಾರಾಟ ದಾಖಲೆಯನ್ನು ಮುರಿದು ಮಾರುತಿ ಸುಜುಕಿ ಹೊಸ  ಇತಿಹಾಸವನ್ನೇ ಬರೆದಿದೆಯೆಂದೇ ಹೇಳಬಹುದು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು 1,67,520 ಕಾರುಗಳನ್ನು ಮಾರಾಟ ಮಾಡಿತ್ತು.ಯುಟಿಲಿಟಿ ವೆಹಿಕಲ್ ವಿಭಾಗದಲ್ಲಿ, ಕಂಪನಿಯು 91 ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ವಿಭಾಗವು ಬ್ರೆಝಾ, ಗ್ರ್ಯಾಂಡ್ ವಿಟಾರಾ, ಎರ್ಟಿಗಾ ಮತ್ತು XL6 ನಂತಹ ಮಾದರಿಗಳನ್ನು ಒಳಗೊಂಡಿದೆ.

ಇನ್ನು ಹುಂಡೈನ ದೇಶಿಯ ಮಾರಾಟವು ಶೇಕಡಾ 15 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಹೋಲಿಸಿ ನೋಡಿದ್ರೆ ಇದೇ ತಿಂಗಳಿನಲ್ಲಿ 48,001 ಯುನಿಟ್‌ಗಳಷ್ಟು ಮಾರಾಟವಾಗಿತ್ತು. ಆದರೆ ಈಗ ಇದು  55,128 ಯುನಿಟ್‌ಗಳನ್ನು ತಲುಪಿದೆ ಅಂದರೆ ಅಚ್ಚರಿಯ ಸಂಗತಿ. ಮತ್ತೊಂದೆಡೆ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ನ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಶೇಕಡಾ 7 ರಷ್ಟು ಏರಿಕೆಯಾಗಿ 48,337 ಯುನಿಟ್‌ಗಳಿಗೆ ತಲುಪಿದೆ. ಇದರಲ್ಲಿ ಎಲೆಕ್ಟ್ರಿಕ್ ವಾಹನಗಳೂ ಸೇರಿದ್ದು, ಇದರ ಹೊರತಾಗಿ, ಮಹೀಂದ್ರಾದ ಯುಟಿಲಿಟಿ ವಾಹನಗಳ ಸಗಟು ಮಾರಾಟವು ವರ್ಷದಿಂದ ವರ್ಷಕ್ಕೆ 36 ಪ್ರತಿಶತದಷ್ಟು ಹೆಚ್ಚಾಗಿದ್ದು, ಮಾರಾಟವು 43,708 ಯುನಿಟ್‌ಗಳಿಗೆ ತಲುಪಿದೆ.

Related posts

ಸುಳ್ಯಕ್ಕೆ ಪ್ರಭಾರ ತಹಶೀಲ್ದಾರ್ ಆಗಿ ಅರವಿಂದ್ ಕೆ.ಎಂ ನೇಮಕ, ಪ್ರಸ್ತುತ ತಹಶೀಲ್ದಾರ್ ಜಿ.ಮಂಜುನಾಥ್ ಗೆ ವರ್ಗಾವಣೆ

ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಬೊಮ್ಮಾಯಿ ಘೋಷಿಸಿದ ಹೊಸ ಯೋಜನೆಗಳು

SSLC ಶೇ.94.8, PUCಯಲ್ಲಿ ಶೇ.99 ಅಂಕ ಪಡೆದ ಯುವತಿಯಿಂದ ಸನ್ಯಾಸ ದೀಕ್ಷೆ..!