ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಇಂಟರ್ ನೆಟ್ ಬಹಳ ದುಬಾರಿಯಾಗಿದೆ.ಸೋಶಿಯಲ್ ಮೀಡಿಯಾ ಟ್ರೆಂಡಿಂಗ್ ನಲ್ಲಿರೋದ್ರಿಂದ ಅದರ ಬಳಕೆ ಜಾಸ್ತಿಯಾಗಿದೆ. ಹೀಗಾಗಿ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತನ್ನ ಕೋಟ್ಯಂತರ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.ಕೇವಲ 30ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಆಕರ್ಷಕ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಇದರ ಪ್ರಯೋಜನವೇನು? ಇಲ್ಲಿ ತಿಳ್ಕೊಳ್ಳಿ..
ಅತೀ ಕಡಿಮೆ ಬೆಲೆ
ಜಿಯೋ, ಏರ್ಟೆಲ್, ಬಿಎಸ್‌ಎನ್‌ಎಲ್, ವಿಐ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ಸಂದರ್ಭದಲ್ಲಿ ಜಿಯೋ ತನ್ನ ಜಿಯೋ ಫೋನ್ ಗ್ರಾಹಕರಿಗಾಗಿ26ರೂ. ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. ಇದರಲ್ಲಿ 2ಜಿಬಿ ಉಚಿತ ಹೈ ಸ್ಪೀಡ್ ಡೇಟಾ ಲಭ್ಯವಿದ್ದು, ಡೇಟಾ ಮುಗಿದ ಬಳಿಕ ಇದರ ಇಂಟರ್ನೆಟ್ ಸ್ಪೀಡ್ 64ಕೆಬಿಪಿಎಸ್ ಗೆ ಇಳಿಕೆಯಾಗಲಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಜಿಯೋ.ಕಾಮ್ ಅಥವಾ ಜಿಯೋ ಆ್ಯಪ್ ಮುಖಾಂತರ ಈ ಪ್ಯಾಕ್ ಅನ್ನು ರಿಚಾರ್ಜ್ ಮಾಡಬಹುದಾಗಿದೆ. ಈ ರಿಚಾರ್ಜ್ ಯೋಜನೆಯಲ್ಲಿ ಲಭ್ಯವಿರುವ 2ಜಿಬಿ ಡೇಟಾವನ್ನು 28ದಿನಗಳವರೆಗೆ ಬಳಸಬಹುದಾಗಿದೆ. ಕಡಿಮೆ ಡೇಟಾ ಬಳಸುವ ಗ್ರಾಹಕರಿಗೆ ಜಿಯೋದ ಅತ್ಯಂತ ಕಡಿಮೆ ಬೆಲೆಯ ಈ ರಿಚಾರ್ಜ್ ಪ್ಲಾನ್ ತುಂಬಾ ಉಪಯೋಗಕ್ಕೆ ಬರಲಿದೆ.