ನ್ಯೂಸ್ ನಾಟೌಟ್: ಉದ್ಯಾನನಗರಿ ಬೆಂಗಳೂರಿನಲ್ಲಿರುವ ಸುಳ್ಯದ ಯುವಕರ ತಂಡದ ವಾಟ್ಸಾಪ್ ಗ್ರೂಪ್ ತೆರೆದುಕೊಂಡಿದೆ. ಟೀಂ ಸುಳ್ಯ ಇನ್ ಬೆಂಗಳೂರು ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು.
ಗ್ರೂಪ್ ಅಡ್ಮಿನ್ ಅಶ್ರಫ್ ಟರ್ಲಿ, ಗ್ರೂಪ್ ಅಡ್ಮಿನ್ ರಶೀದ್ ಚೆಂಗಳ, ಅಡ್ಮಿನ್ ಗಳಾದ ಅಶ್ರಫ್ ಎಲಿಮಲೆ ಮತ್ತು ಸಿದ್ದೀಕ್ ನಾವೂರು ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರೂಪ್ ಅಡ್ಮಿನ್ ರಶೀದ್ ಚೆಂಗಳ ರವರು ಪ್ರಾಸ್ತವಿಕವಾಗಿ ಮಾತನಾಡಿ ಸಮ್ಮಿಲನ ಕಾರ್ಯಕ್ರಮದ ಉದ್ದೇಶವನ್ನು ಮಂಡಿಸಿದರು . ಅಡ್ಮಿನ್ ಗಳಾದ ಅಶ್ರಫ್ ಎಲಿಮಲೆ ಮತ್ತು ಸಿದ್ದೀಕ್ ನಾವೂರು ಕಾರ್ಯಕ್ರಮದ ರೂಪ ರೇಖೆಗಳ ಬಗ್ಗೆ ಅಭಿಪ್ರಾಯ ಮಂಡಿಸಿದರು. ಸುದೀರ್ಘ ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮೇ ತಿಂಗಳಲ್ಲಿ ತಂಡದ ಮೀಟ್ ದ ಟೀಂ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವುದೆಂದು ತೀರ್ಮಾನಿಸಲಾಯಿತು.