ಶಿಕ್ಷಣಸುಳ್ಯ

ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಫಲಿತಾಂಶ ಪ್ರಕಟ: ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಸತತ 7ನೇ ಬಾರಿ ಶೇ.100 ಫಲಿತಾಂಶ

146

ನ್ಯೂಸ್ ನಾಟೌಟ್: ಭವಿಷ್ಯದ ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಶಿಕ್ಷಕರ ಜ್ಞಾನ ಕೇಂದ್ರ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಪರೀಕ್ಷಾ ಫಲಿತಾಂಶ (ಡಿ.ಎಂ.ಇ.ಡಿ)ದಲ್ಲಿ ಭರ್ಜರಿ ಸಾಧನೆ ಮಾಡಿದೆ. ಸತತ 7ನೇ ಬಾರಿ ಶೇ.100 ಫಲಿತಾಂಶ ಪಡೆದುಕೊಂಡಿದೆ. ಒಟ್ಟು 25 ವಿದ್ಯಾರ್ಥಿ ಶಿಕ್ಷಕಿಯರು ಪರೀಕ್ಷೆಗೆ ಕುಳಿತಿದ್ದರು.

ಈ ಪೈಕಿ 13 ವಿದ್ಯಾರ್ಥಿ ಶಿಕ್ಷಕಿಯರು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿ ಶಿಕ್ಷಕಿಯರು ಪ್ರಥಮ ದರ್ಜೆಯಲ್ಲಿ, ಇಬ್ಬರು ದ್ವಿತೀಯ ದರ್ಜೆಯಲ್ಲೂ ಉತ್ತೀರ್ಣರಾಗಿದ್ದಾರೆ. ಕಾಂಚನ (1068), ಮೀರಾ (1021), ಗ್ರೀಷ್ಮ ಕೆ (1013) ಚೈತ್ರ ಎಂ (1012), ಹರ್ಷಿತಾ ಸಿ. ಎಂ (1004), ಪೂರ್ಣಿಮಾ ಕೆ. ಎಸ್ (984), ರಚನಾ (981), ಫಾತಿಮತ್ ರೋಝಾ (975), ಐಶ್ವರ್ಯರಾಜ್ (968), ಫಾತಿಮತ್ ತೌಸೀರಾ (962), ಶಾಹಿನಾ ಎನ್ (962), ದೀಪಿಕಾ ಸಿ ಹೆಚ್ (960), ರಂಜಿತಾ ಬಿ (960) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸುಚಿತ್ರ, ಉಷಾ ಸಿ ಪಿ., ಧನ್ಯಶ್ರೀ ಕೆ ಎಸ್, ಮೇಘನಾ ಕೆ ಎಸ್, ಗುಣ ಶ್ರೀ ಕೆ, ರಾಜೇಶ್ವರಿ ಕೆ, ಸುಶ್ಮಿತಾ ಎಂ ಎಸ್, ಸಂಧ್ಯಾ ಎನ್, ಪ್ರಮೀಳಾ ಬಿ, ರಕ್ಷಿತಾ ಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯಲ್ಲಿ 2024-25ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರವೇಶಾತಿ ಆರಂಭಗೊಂಡಿದೆ. ಆಸಕ್ತರು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ:9845713297

Click 👇

https://newsnotout.com/2024/05/election-and-re-voting-misleading
https://newsnotout.com/2024/05/narendra-modi-and-teacher-rajak
https://newsnotout.com/2024/05/30-year-old-jyoti-amge-viral-video
See also  ಸುಳ್ಯ:ಎನ್‌ಎಮ್‌ಸಿ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಡಿಜಿಟಲ್ ಬಗ್ಗೆ ಮಾಹಿತಿ ಕಾರ್ಯಕ್ರಮ
  Ad Widget   Ad Widget   Ad Widget   Ad Widget   Ad Widget   Ad Widget   Ad Widget