ಸುಳ್ಯ

ಬೆಳ್ಳಾರೆ : ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಿಂದ ಸದಾಶಿವ ಶಿಶು ಮಂದಿರದಲ್ಲಿ ಶಿಕ್ಷಕರ ದಿನಾಚರಣೆ

28
Yellow Background
Spread the love

ನ್ಯೂಸ್‌ ನಾಟೌಟ್‌: ಗುರುವಿನ ಸಹಾಯವಿಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ. ಅದರಂತೆ ಪ್ರತಿಯೊಬ್ಬ ಸಾಧಕನ ಜೀವನದ ಗುರಿ ಗುರು ಹಾಕಿಕೊಟ್ಟ ಮಾರ್ಗದ ಆಧಾರದಲ್ಲೇ ನಡೆಯುತ್ತದೆ ಎಂದು ಬೆಳ್ಳಾರೆ ಅಜಪಿಲ ಶ್ರೀ ಸದಾಶಿವ ಚಾರಿಟೆಬಲ್ ಸೊಸೈಟಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ಹೇಳಿದರು.

ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಅಜಪಿಲ ಶ್ರೀ ಸದಾಶಿವ ಚಾರಿಟೆಬಲ್ ಸೊಸೈಟಿ ಆಡಳಿತದಲ್ಲಿ ನಡೆಸಲ್ಪಡುತ್ತಿರುವ ಶ್ರೀ ಸದಾಶಿವ ಶಿಶು ಮಂದಿರದಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರ ದಿನಾಚರಣೆಯ ಸಂದರ್ಭ ಶಿಶು ಮಂದಿರದ ಮಾತಾಜಿ ತೇಜೇಶ್ವರಿ ಅವರನ್ನು ಜ್ಞಾನದೀಪ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಾಸ್ತವಿಸಿ, ಸ್ವಾಗತಿಸಿದರು. ಶಿಕ್ಷಕಿ ಗೀತಾ ಬಾಲಚಂದ್ರ ವಂದಿಸಿದರು. ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಶಿಕ್ಷಕಿಯರಾದ ಅಂಜಲಿ ಮತ್ತು ಸುನೀತಾ ಸಹಕರಿಸಿದರು. ಜ್ಞಾನದೀಪದ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಸೇರಿದಂತೆ ವೇದಪಾಠಶಾಲೆಯ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.

See also  ಅಂಕತ್ತಡ್ಕ:ಓಡ್ರಪ್ಪೋ ಓಡಿ.. ಕಾಡುಕೋಣಗಳು ಬಂದ್ವು..!ಜನರನ್ನು ಕ್ಯಾರೇ ಮಾಡದೇ ಹಾಡಹಗಲಲ್ಲೇ ರಸ್ತೆಯಲ್ಲಿ ಹೇಗೆ ಓಡಾಡ್ತಿವೆ ನೋಡಿ..!
  Ad Widget   Ad Widget   Ad Widget