ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಅತಿಥಿ ಶಿಕ್ಷಕಿಗೆ ಮೆಸೇಜ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಥಳಿತ..! ತಪ್ಪೊಪ್ಪಿಗೆ ಪತ್ರ ಬರೆಸಿ, ಕ್ಷಮೆ ಕೇಳಿಸಿದ ಆಕೆಯ ಕುಟುಂಬಸ್ಥರು

ನ್ಯೂಸ್ ನಾಟೌಟ್: ಶಾಲಾ ಅತಿಥಿ ಶಿಕ್ಷಕಿಗೆ ಸಹ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಶಿಕ್ಷಕಿಯ ಸಂಬಂಧಿಕರು ಶಿಕ್ಷಕನ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಧರ್ಮದೇಟು ಕೊಟ್ಟು ಕ್ಷಮೆ ಕೇಳುವಂತೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಯಾಯಚೂರಿನ ಹೊರವಲಯದಲ್ಲಿರುವ ಆದರ್ಶ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಮೆಹಬೂಬ್ ಅಲಿ ಆರೋಪಿಯಾಗಿದ್ದು, ಆತನನ್ನು ಶಿಕ್ಷಕಿಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಲಾಗಿದೆ.

ಸಹ ಶಿಕ್ಷಕ ಮೆಹಬೂಬ್ ಅಲಿ ತಮ್ಮದೇ ಶಾಲೆಯ ಅತಿಥಿ ಶಿಕ್ಷಕಿಗೆ ಅಸಹ್ಯವಾಗಿ ಮೆಸೇಜ್ ಮಾಡಿ, ಮಂಚಕ್ಕೆ ಕರೆದಿದ್ದರು. ಈ ಹಿನ್ನೆಲೆ ನಿನ್ನೆ(ಆ.12) ಶಾಲೆ ಬಳಿ ಬಂದಿದ್ದ ಶಿಕ್ಷಕಿ ಸಂಬಂಧಿಕರು ಮೆಹಬೂಬ್ ಅಲಿ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಧರ್ಮದೇಟು ನೀಡಿದ್ದಾರೆ. ಸದ್ಯ ಮೆಹಬೂಬ್ ಅಲಿ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡಿದ್ದಾರೆ. ಕೊನೆಗೆ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ಶಿಕ್ಷಕ ಕ್ಷಮೆಯಾಚಿಸಿದ್ದರಿಂದ ಪೊಲೀಸರಿಗೆ ದೂರು ನೀಡದೇ ಶಿಕ್ಷಕಿ ಸುಮ್ಮನಾಗಿದ್ದಾರೆ ಎನ್ನಲಾಗಿದೆ.

Click

https://newsnotout.com/2024/08/chamundi-betta-mysore-kannada-news-state-govt-interfere-court-stayfe/
https://newsnotout.com/2024/08/kerala-bank-donates-50-lakh-to-wayanad-and-loans-taken-by-that-accused-are-releaf/
https://newsnotout.com/2024/08/missing-from-10-year-and-found-in-bangladesh-boarder-a-maths-teacher/

Related posts

2 ಕೋಟಿ ರೂ. ನೋಟು, 50 ಲಕ್ಷ ರೂ. ನಾಣ್ಯಗಳಿಂದ ಗಣಪತಿಗೆ ಶೃಂಗಾರ; ಫೋಟೋಗಳಲ್ಲಿ ನೋಡಿ

1 ವರ್ಷದಿಂದ ನಿರಂತರ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ..! ಆತನ ಹಿನ್ನೆಲೆ ಕಂಡು ಪೊಲೀಸರೇ ಶಾಕ್..!

ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಬಲಿ..! 11 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ..!