ಕರಾವಳಿ

ಪಾಸು ಮಾಡುವಂತೆ ಕೋರಿ ಟೀಚರ್‌ಗೇ ಲಂಚ ನೀಡಿದ ವಿದ್ಯಾರ್ಥಿ..! ಉತ್ತರ ಪತ್ರಿಕೆಯ ಹಿಂದಿತ್ತು ನೋಟುಗಳ ರಾಶಿ..!

ನ್ಯೂಸ್ ನಾಟೌಟ್: ಪರೀಕ್ಷೆಯಲ್ಲಿ ಉತ್ತಮ ಅಂಕ ತೆಗೆದು ಪಾಸಾಗಬೇಕು ಅನ್ನುವುದು ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ ಕೆಲವು ವಿದ್ಯಾರ್ಥಿಗಳು ಜಸ್ಟ್ ಪಾಸ್ ಆದ್ರೆ ಸಾಕಪ್ಪ ಅನ್ನುವ ಮನಸ್ಥಿತಿ ಹೊಂದಿರುತ್ತಾರೆ. ಆದರೆ ಇನ್ನೂ ಕೆಲವು ವಿದ್ಯಾರ್ಥಿಗಳು ದೇವರೇ ಹೇಗಾದರೂ ಮಾಡಿ ಈ ಸಲ ನನ್ನನ್ನೊಮ್ಮೆ ಪಾಸ್ ಮಾಡಿದ್ರೆ ನಿಂಗೆ ಹರಕೆ ಕೊಡುತ್ತೇನೆ ಎಂದು ಹೇಳುತ್ತಿರುತ್ತಾರೆ. ಆದರೆ ಇನ್ನೂ ಕೆಲವು ವಿದ್ಯಾರ್ಥಿಗಳು ಇದಕ್ಕಿಂತಲೂ ಒಂದು ಹೆಜ್ಜೆ ಮುಂದು ಹೋಗಿ ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡುವ ಅಧ್ಯಾಪಕರಿಗೆ ಹಣ ನೀಡುತ್ತಾರೆ. ಇಂಥಹುದೇ ಒಂದು ಘಟನೆ ಇದೀಗ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿ ಉತ್ತರ ಪತ್ರಿಕೆ ಜೊತೆ ಲಗತ್ತಿಸಿದ ನೋಟುಗಳ ಫೋಟೋಗಳು ವೈರಲ್ ಆಗಿವೆ.

ಇಲ್ಲೊಬ್ಬ ವಿದ್ಯಾರ್ಥಿಯು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು(Answer Sheet) ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ (Teacher) ಲಂಚ ನೀಡುವ ಪ್ರಯತ್ನ ಮಾಡಿದ್ದಾನೆ. ತಾನು ಬರೆದ ಉತ್ತರ ಪತ್ರಿಕೆಯಲ್ಲಿ ನೋಟು ಇಟ್ಟು(Currency in Answer Sheet) ಪಾಸು ಮಾಡುವಷ್ಟು ಅಂಕಗಳನ್ನು ನೀಡುವಂತೆ ವಿನಂತಿಸಿಕೊಂಡಿದ್ದಾನೆ. ಈ ಸಂಬಂಧ ಪೋಸ್ಟ್ ಟ್ವಿಟರ್ ನಲ್ಲಿ ವೈರಲ್ ಆಗಿದೆ (Viral News). ಐಪಿಎಸ್ ಅಧಿಕಾರಿ ಅರುಣ್ ಬೋಥ್ರಾ ಅವರು ಈ ಕುರಿತಾದ ಮಾಹಿತಿಯನ್ನು ಟ್ವಿಟರ್ ನಲ್ಲಿ ಷೇರ್ ಮಾಡಿದ್ದಾರೆ. ಅವರ ಪೋಸ್ಟ್‌ನಲ್ಲಿ ವಿದ್ಯಾರ್ಥಿ ಲಗತಿಸಿದ್ದ ನೋಟುಗಳನ್ನು ಕಾಣಬಹುದಾಗಿದೆ.

ಈ ಫೋಟೋವನ್ನು ಟೀಚರ್ ವೊಬ್ಬರು ನನಗೆ ಕಳುಹಿಸಿದ್ದಾರೆ. ಪಾಸಿಂಗ್ ಮಾರ್ಕ್ಸ ಕೊಡುವಂತೆ ಟೀಚರ್‌ಗೆ ವಿನಂತಿಯೊಂದಿಗೆ ಈ ನೋಟುಗಳನ್ನು ಉತ್ತರ ಪ್ರತಿಕೆಯಲ್ಲಿ ಇಡಲಾಗಿತ್ತು. ಈ ಚಿತ್ರವು ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಾಕಷ್ಟು ಮಾತನಾಡುತ್ತದೆ ಎಂದು ಐಪಿಎಸ್ ಅಧಿಕಾರಿ ಬೋಥ್ರಾ ಅವರು ಟ್ವೀಟ್ ಮಾಡಿದ್ದಾರೆ.

ಈ ಪೋಸ್ಟ್ ಆಗಸ್ಟ್ 21ರಂದು ಶೇರ್ ಮಾಡಲಾಗಿದ್ದು ಇಲ್ಲಿ ತನಕ ಸುಮಾರು ೧ ಲಕ್ಷ ವಿವ್ಸ್ ದಾಟಿದೆ. 1200ಕ್ಕೂ ಹೆಚ್ಚು ಲೈಕ್ಸ್ ದೊರೆತಿದ್ದು, ಸಾಕಷ್ಟು ಜನರು ಈ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.

ನನ್ನ ಅಜ್ಜಿ ಶಿಕ್ಷಕರಾಗಿದ್ದರು. ನಾನು ಚಿಕ್ಕವನಿದ್ದಾಗ ಮತ್ತು ಒಂದು ಬೇಸಿಗೆಯಲ್ಲಿ ಭೇಟಿ ನೀಡಿದಾಗ ಅವರು ಮನೆಗೆ ಬೋರ್ಡ್ ಪರೀಕ್ಷೆಯ ಉತ್ತರದ ಪ್ರತಿಗಳನ್ನು ಪರೀಕ್ಷಿಸಲು ತರುತ್ತಿದ್ದರು. ಇದು 15-20 ವರ್ಷಗಳ ಹಿಂದಿನ ಮಾತು. ಆಗ 20ರಿಂದ 100 ರೂ.ವರೆಗೆ ನೋಟುಗಳು ಉತ್ತರ ಪತ್ರಿಕೆಯಲ್ಲಿ ಇರುವುದನ್ನು ಗಮನಿಸಿದ್ದೇನೆ. ಆದರೂ , ಅವರ ಬರೆದ ಉತ್ತರಕ್ಕೆ ಅನುಗುಣವಾಗಿಯೇ ಅವರು ಮಾರ್ಕ್‌ ನೀಡುತ್ತಿದ್ದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದರು.

Related posts

ಸುಬ್ರಹ್ಮಣ್ಯ: ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ವೇಳೆ ಡಿಕ್ಕಿ ಹೊಡೆದ ಬೈಕ್..!ಕರ್ತವ್ಯ ನಿರತ ಅರಣ್ಯ ಪಾಲಕನಿಗೆ ಗಾಯ,ಆಸ್ಪತ್ರೆಗೆ ದಾಖಲು

ಅಯ್ಯೋ..ಬಿಸಿಲೇ..! ಬರಿದಾಗಿದೆ ನೇತ್ರಾವತಿಯ ಒಡಲು

ಪುತ್ತೂರು:ಬಿಜೆಪಿ ನಾಯಕರ ವಿರುದ್ಧ ಬ್ಯಾನರ್, ಚಪ್ಪಲಿ ಹಾರ!,ಮುಗಿಲು ಮುಟ್ಟಿದ ಕಾರ್ಯಕರ್ತರ ಆಕ್ರೋಶ