ಕ್ರೈಂವೈರಲ್ ನ್ಯೂಸ್

ಟ್ಯಾಕ್ಸಿ ಚಾಲಕನಾಗಿದ್ದ ಆಕೆಯ ಗಂಡನಿಗೆ ಜೀವನಾಂಶ ಪಾವತಿಸುವಂತೆ ಆದೇಶಿಸಿದ ಕೋರ್ಟ್..!‌ ಚಿಲ್ಲರೆ ರೂಪದಲ್ಲಿ 80 ಸಾವಿರ ರೂ. ಪರಿಹಾರ ಹಣವನ್ನು ಗೋಣಿಯಲ್ಲಿ ಕೋರ್ಟ್ ಗೆ ತಂದ ಪತಿ..!

100

ನ್ಯೂಸ್ ನಾಟೌಟ್: ಸಾಮಾನ್ಯವಾಗಿ ವಿಚ್ಛೇದನ ಪ್ರಕರಣಗಳಲ್ಲಿ ಗಂಡನಾದವನು ಡಿವೋರ್ಸ್‌ ಬಳಿಕ ಹೆಂಡತಿಗೆ ಇಂತಿಷ್ಟು ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡುತ್ತದೆ. ನ್ಯಾಯಾಲಯ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದು, ಇದಕ್ಕಾಗಿ ಈ ವ್ಯಕ್ತಿ 1 ಮತ್ತು 2 ರೂ. ನಾಣ್ಯದ ರೂಪದಲ್ಲಿ ಪತ್ನಿಗೆ 80 ಸಾವಿರ ರೂ. ಪರಿಹಾರ ಹಣವನ್ನು ನೀಡಿದ್ದಾರೆ. ಹೌದು ಆ ವ್ಯಕ್ತಿ 80 ಸಾವಿರ ರೂ. ಮೌಲ್ಯದ 1-2 ರೂಪಾಯಿ ಚಿಲ್ಲರೆ ಹಣದ ಕಟ್ಟನ್ನು ಕೋರ್ಟ್‌ಗೆ ಹೊತ್ತು ತಂದಿದ್ದು, ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರು ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲು ಸುಮಾರು 80 ಸಾವಿರ ಮೌಲ್ಯದ 1 ಮತ್ತು 2 ರೂಪಾಯಿ ಚಿಲ್ಲರೆ ಹಣದ ಕಟ್ಟನ್ನು ಕೋರ್ಟ್‌ ಗೆ ತಂದಿದ್ದಾರೆ.

ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ 37 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಪತ್ನಿ ಕಳೆದ ವರ್ಷ ಕೊಯಮತ್ತೂರು ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್‌ 2 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಆ ವ್ಯಕ್ತಿಗೆ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಮಾಜಿ ಪತ್ನಿಗೆ ಪರಿಹಾರ ಹಣ ನೀಡುವ ಸಲುವಾಗಿ ಆ ವ್ಯಕ್ತಿ ಸುಮಾರು 80 ಸಾವಿರ ಮೌಲ್ಯದ 1 ಮತ್ತು ಎರಡು ರೂಪಾಯಿ ನಾಣ್ಯಗಳ 20 ಕಟ್ಟುಗಳನ್ನು ನ್ಯಾಯಾಲಯಕ್ಕೆ ತಂದಿದ್ದಾರೆ. ನಾಣ್ಯಗಳ ರೂಪದಲ್ಲಿಯೇ ವಿಚ್ಛೇದಿತ ಪತ್ನಿಗೆ ಪರಿಹಾರ ಹಣ ನೀಡಿದ್ದು, ಈ ಹಣವನ್ನು ನಗದು ರೂಪದಲ್ಲಿಯೇ ನೀಡಬೇಕು ಎಂದು ಕೋರ್ಟ್‌ ಹೇಳಿದ್ದಕ್ಕೆ ಆ ವ್ಯಕ್ತಿ ಮರುದಿನ ಕರೆನ್ಸಿ ನೋಟು ರೂಪದಲ್ಲಿ ಹಣ ನೀಡಿದ್ದಾರೆ ಎನ್ನಲಾಗಿದೆ. ಮತ್ತು ಬಾಕಿ ಉಳಿದ 1.2 ಲಕ್ಷ ರೂ ಹಣವನ್ನು ಆದಷ್ಟು ಬೇಗ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.

Click

https://newsnotout.com/2024/12/theft-kannada-news-80-people-passenger-govt-bus/
https://newsnotout.com/2024/12/takeoff-airplane-airhostelss-viral-news/
https://newsnotout.com/2024/12/kasaragodu-kannada-news-5-shops-are-under-fire-hd/
https://newsnotout.com/2024/12/udupi-kannada-news-tourist-boat-sink-boat-rider-suspence/
https://newsnotout.com/2024/12/viratkohli-restorant-in-bengaluru-cricketer-bbmp-notice/
https://newsnotout.com/2024/12/ticjet-dog-kannada-news-betting-issue-police-arrested-d/
https://newsnotout.com/2024/12/baby-naming-issue-court-case-couple-happy-ending/
https://newsnotout.com/2024/12/kannada-news-police-wood-cutter-kananda-news/
https://newsnotout.com/2024/12/iphone-kannada-news-temple-tamil-nadu-viral-issue-h/
See also  ಸಮುದ್ರದ ನಡುವೆ ಚೀನಾ ಪ್ರಜೆಗೆ ಹೃದಯಾಘಾತ..! ಕಗ್ಗತ್ತಲ ರಾತ್ರಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಭಾರತೀಯ ಕೋಸ್ಟ್​ ಗಾರ್ಡ್​​​! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget