ಜೀವನಶೈಲಿ

ಟಾಟಾ ಮೋಟಾರ್ಸ್ ನ ಹೊಸ ಕಾರು ಪಂಚ್ ಬಿಡುಗಡೆ, ಕಡಿಮೆ ಬೆಲೆಗೆ ಸುರಕ್ಷಿತ ಪ್ರಯಾಣ ಭರವಸೆ

521
Spread the love

ನವದೆಹಲಿ: ಟಾಟಾ ಮೋಟಾರ್ಸ್ ಸೋಮವಾರ ಸಬ್–ಕಾಂಪ್ಯಾಕ್ಟ್ ಎಸ್ಯುವಿ ‘ಪಂಚ್’ (Punch) ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ರೂ. 5.49 ಲಕ್ಷ ನಿಗದಿಯಾಗಿದೆ.

ಭಾರತ, ಇಂಗ್ಲೆಂಡ್ ಹಾಗೂ ಇಟಲಿಯ ಟಾಟಾ ಮೋಟಾರ್ಸ್ ಸ್ಟುಡಿಯೊಗಳಲ್ಲಿ ಈ ಹೊಸ ಸಬ್–ಕಾಂಪ್ಯಾಕ್ಟ್ ಎಸ್ಯುವಿಯ ವಿನ್ಯಾಸ ಮಾಡಲಾಗಿದೆ. ಚಿಕ್ಕ ಗಾತ್ರವಿದ್ದರೂ ಹೆಚ್ಚಿನ ಒಳಾಂಗಣ ಸ್ಥಳಾವಕಾಶ, ಸುರಕ್ಷತೆ, ಸಾಮರ್ಥ್ಯ ಹಾಗೂ ಹೊಸ ಆಯ್ಕೆಗಳನ್ನು ಬಯಸುವ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ‘ಪಂಚ್’ ಅಭಿವೃದ್ಧಿ ಪಡಿಸಲಾಗಿದೆ.ಮ್ಯಾನುಯಲ್ ಮತ್ತು ಆಟೊಮ್ಯಾಟಿಕ್ ಎರಡೂ ಆಯ್ಕೆಗಳಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಟಾಟಾ ಮೋಟಾರ್ಸ್ ಪ್ರಕಾರ, ಈ ಹೊಸ ವಾಹನವು ಪ್ರತಿ ಲೀಟರ್ ಪೆಟ್ರೋಲ್ಗೆ 18.82ರಿಂದ 18.97 ಕಿ.ಮೀ. ದೂರ ಕ್ರಮಿಸುತ್ತದೆ.

ಜಿಎಎನ್ ಸಿಎಪಿ ಕ್ರಾಶ್‌ ಟೆಸ್ಟ್ ನಲ್ಲಿ ‘ಪಂಚ್’ 5 ಸ್ಟಾರ್‌ ಗಳ ರೇಟಿಂಗ್ ಪಡೆದಿದೆ. ಅಂದರೆ, ಅತ್ಯುತ್ತಮ ಸುರಕ್ಷತಾ ಮಟ್ಟವನ್ನು ಹೊಂದಿದೆ. ಎತ್ತರದ ಸೀಟ್ ಗಳು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 370 ಮಿಮೀ ವಾಟರ್ ವೇಡಿಂಗ್ ಸಾಮರ್ಥ್ಯದಿಂದಾಗಿ ನೀರು ತುಂಬಿದ ಮತ್ತು ಕಚ್ಚಾ ರಸ್ತೆಗಳಲ್ಲೂ ಸಂಚರಿಸಲು ಅನುವಾಗಲಿದೆ.’ಪಂಚ್ ಮೂಲಕ ನಾವು ಹೊಸ ವರ್ಗವನ್ನೇ ಸೃಷ್ಟಿಸಿದ್ದೇವೆ. ಎಸ್ ಯುವಿ ಗುಣಗಳಿರುವ ಚಿಕ್ಕ ಗಾತ್ರದ ಕಾರುಗಳ ಅಗತ್ಯಕ್ಕೆ ತಕ್ಕಂತೆ ಇದನ್ನು ರೂಪಿಸಲಾಗಿದೆ’ ಎಂದು ಟಾಟಾ ಮೋಟಾರ್ಸ್ ನ ಪ್ರಯಾಣಿಕ ವಾಹನಗಳ ಬಿಸಿನೆಸ್ ಘಟಕದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ. ಆಲ್ಟ್ರೋಜ್ ಮತ್ತು ನೆಕ್ಸಾನ್ ನಂತರ ಕ್ರಾಶ್ ಟೆಸ್ಟ್ ನಲ್ಲಿ ಅತ್ಯುತ್ತಮ ರೇಟಿಂಗ್ ಪಡೆದಿರುವ ಟಾಟಾ ಮೋಟಾರ್ಸ್ ನ ಮೂರನೇ ಕಾರು ಪಂಚ್ . ಆಲ್ಟ್ರೋಜ್ ಮತ್ತು ನೆಕ್ಸಾನ್ ನಂತರ ಕ್ರಾಶ್ ಟೆಸ್ಟ್ ನಲ್ಲಿ ಅತ್ಯುತ್ತಮ ರೇಟಿಂಗ್ ಪಡೆದಿರುವ ಟಾಟಾ ಮೋಟಾರ್ಸ್ ನ ಮೂರನೇ ಕಾರು ಪಂಚ್ .

ಆರಂಭಿಕ ಬೆಲೆ ರೂ. 5.49 ಲಕ್ಷ

ಟಾಟಾ ಪಂಚ್ ಬೇಸಿಕ್ ಮಾದರಿಗೆ ರೂ. 5.49 ಲಕ್ಷ (ಎಕ್ಸ್–ಷೋರೂಂ) ನಿಗದಿಯಾಗಿದೆ. ಅಕಂಪ್ಲಿಷ್ಡ್, ಅಡ್ವೆಂಚರ್, ಕ್ರಿಯೇಟಿವ್ ಹಾಗೂ ಪ್ಯೂರ್ –ಒಟ್ಟು ನಾಲ್ಕು ಮಾದರಿಗಳಲ್ಲಿ ಪಂಚ್ ಲಭ್ಯವಿದ್ದು, ಗರಿಷ್ಠ ಬೆಲೆ ರೂ. 8.49 ಲಕ್ಷವಿದೆ. ಏಳು ಭಿನ್ನ ಬಣ್ಣಗಳಲ್ಲಿ ಕಾರು ತಯಾರಿಸಲಾಗುತ್ತಿದೆ.

See also  ಜೂ.14 ಇಂದು ವಿಶ್ವ ರಕ್ತದಾನಿಗಳ ದಿನ, ಜಾತಿ ಧರ್ಮ ಮೀರಿದ ರಕ್ತದಾನದ ಮಹತ್ವವೇನು..? ರಕ್ತದಾನಿ ಸಂಜೀವ ಕುದ್ಪಾಜೆಯವರ ಒಂದಿಷ್ಟು ಮಾತು
  Ad Widget   Ad Widget   Ad Widget   Ad Widget   Ad Widget   Ad Widget