ಪ್ರಿಯ ಓದುಗರೇ,
ಬೆಳೆಯುವ ಮಗು ಎಡವುದು ಸಹಜ, ಹಾಗಂತ ಆಗಿರುವ ತಪ್ಪನ್ನು ಸಂಪಾದಕ ಮಂಡಳಿ ಎಂದಿಗೂ ಸಮರ್ಥಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ.
ಹಾಗೆಯೇ ನಮ್ಮ ವರದಿಗಾರರು ನೀಡಿದ ತಪ್ಪು ಮಾಹಿತಿಯಿಂದ ಸುದ್ದಿಯೊಂದು ಪ್ರಕಟಗೊಂಡಿದ್ದಕ್ಕೆ ವಿಷಾದಿಸುತ್ತೇವೆ. ಉಪ್ಪಿನಂಗಡಿ ೩ ದಿನಗಳ ಹಿಂದೆ ನಡೆದ ಅಪಘಾತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.ಆದರೆ ನಮ್ಮಲ್ಲಿ ಸುದ್ದಿ ಪ್ರಕಟಿಸುವಾಗ ಮೃತಪಟ್ಟಿದ್ದಾರೆ ಎಂದಾಗಿತ್ತು. ಕಣ್ತಪ್ಪಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಪ್ರಕಟಗೊಂಡಿತ್ತು.ದೇವರು ಅವರಿಗೆ ಆಯುರಾರೋಗ್ಯ ಕೊಟ್ಟು ಕರುಣಿಸಲಿ. ಸದಾ ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತವಿದೆ. ಹೆಚ್ಚಿನ ಮಾಹಿತಿಗೆ Newsnotout99@gmail.com ಗೆ ಇಮೇಲ್ ಮಾಡಿ. ಧನ್ಯವಾದಗಳು.