ನ್ಯೂಸ್ ನಾಟೌಟ್: ಇತ್ತೀಚೆಗೆ ಶಿವಮೊಗ್ಗದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಶಿಪ್ ನ ಕುಮುಟಿ ವಿಭಾಗದಲ್ಲಿ ತನಿಷ್ಕ ಪವನ್ ಕುಮಾರ್ ಚಿನ್ನದ ಪದಕ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಗೆಲುವು ಸಾಧಿಸಿದ್ದಾರೆ. ಈಕೆ ಉಡುಪಿ ಅಜ್ಜರಕಾಡು ಸೈಂಟ್ ಸಿಸಿಲಿಯ ಪ್ರೌಢಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ. ಭಾರತೀಯ ರೈಲ್ವೆ ಇಲಾಖೆಯ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕಿನ ಕೂರಿಯಾಳದ ಪವನ್ ಕುಮಾರ್ ಮತ್ತು ಅಕ್ಷತಾ ಪವನ್ ಕುಮಾರ್ ದಂಪತಿಯ ಸುಪುತ್ರಿ ಹಾಗೂ ಜಗದೀಶ್ ಭಂಡಾರಿ ಕುರಿಯಾಳ ಮತ್ತು ಮೋಹಿನಿ ಜಗದೀಶ್ ಭಂಡಾರಿ ಅವರ ಮೊಮ್ಮಗಳು ಇನ್ಸ್ಟಿಟ್ಯೂಟ್ ಆಫ್ ಬುಡಕೊನ್ ಕರಾಟೆ ಮಾರ್ಷಯಲ್ ಆರ್ಟ್ ನ ಕೋಚ್ ಆದ ಸಂತೋಷ್ ಕುಮಾರ್ ಶೆಟ್ಟಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.